‘ಜನಿವಾರ ತೆಗೆಸಿದ್ದು ಸರಿಯಲ್ಲ’
‘ಜನಿವಾರ ಎಂಬುದು ಒಬ್ಬರ ಧಾರ್ಮಿಕ ನಂಬಿಕೆ. ಅದನ್ನು ತೆಗೆಸಿ ಪರೀಕ್ಷೆ ಬರೆಸಬೇಕೆಂಬ ನೀತಿ ಸರಿಯಲ್ಲ. ಯಾವುದೇ ಧರ್ಮವಿರಲಿ ಪ್ರತಿಯೊಬ್ಬರ ಧಾರ್ಮಿಕ ಹಕ್ಕನ್ನು ಗೌರವಿಸಬೇಕಾದದ್ದು ಸಂವಿಧಾನಾತ್ಮಕ ಕರ್ತವ್ಯ’ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ‘ಸಂವಿಧಾನದ ಆಶಯಗಳನ್ನು ನಾವು ಮರೆಯದೇ ವರ್ತಿಸುವುದೇ ಈ ನೆಲಕ್ಕೆ ಸಲ್ಲಿಸುವ ಮೊದಲ ಗೌರವ. ಹಿಜಾಬ್ ಸಂದರ್ಭದಲ್ಲೂ ನಮ್ಮ ನಿಲುವು ಇದೇ ಆಗಿತ್ತು. ಈಗಲೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.