ಐದು ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆಗೆ ಎಸ್‌ಟಿ ಸೋಮಶೇಖರ್‌ ಸೂಚನೆ

7

ಐದು ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆಗೆ ಎಸ್‌ಟಿ ಸೋಮಶೇಖರ್‌ ಸೂಚನೆ

Published:
Updated:

ಬೆಂಗಳೂರು: ‘ಒಳಚರಂಡಿ ನಿರ್ಮಾಣ ಯೋಜನೆಯಲ್ಲಿ ಉಲ್ಲಾಳ, ಸೊಣ್ಣೇನಹಳ್ಳಿ, ಸೋಂಪುರ, ಬಿ.ಎಂ.ಕಾವಲ್‌, ಲಿಂಗಧೀರನಹಳ್ಳಿ ಗ್ರಾಮಗಳನ್ನೂ ಸೇರಿಸಬೇಕು’ ಎಂದು ಶಾಸಕ ಎಸ್‌.ಟಿ. ಸೋಮಶೇಖರ್‌, ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಒಳಚರಂಡಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಡಿಎ ಪ್ರದೇಶದ ರಸ್ತೆಗಳಲ್ಲಿ ಜಲಮಂಡಳಿ ವತಿಯಿಂದ ಪೈಪ್‌ಲೈನ್‌ ಅಳವಡಿಸಲು ಮಂಜೂರಾತಿ ದೊರೆತಿಲ್ಲ. ಹೆರೋಹಳ್ಳಿ, ಬನಶಂಕರಿ 6ನೇ ಹಂತದಲ್ಲಿ ಕುಡಿಯುವ ನೀರಿನ ಯೋಜನೆಗೆ ಬಾಕಿ ಇರುವ ವಂತಿಗೆ ಪಾವತಿ ಬಗ್ಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ಬಿಡಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು’ ಎಂದು
ಹೇಳಿದರು.

ಸಭೆಯಲ್ಲಿ ಕೆಂಗೇರಿ ವಾರ್ಡ್‌ನ ಹೊಸಕೆರೆಗೆ ಸೇರುತ್ತಿರುವ ಒಳಚರಂಡಿ ನೀರನ್ನು ತಡೆಯಲು ಶಾಶ್ವತ ಪರಿಹಾರ ರೂಪಿಸಿ, ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಯಿತು. ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !