ಶುಕ್ರವಾರ, ಏಪ್ರಿಲ್ 3, 2020
19 °C
ಆಸ್ತಿಗಳ ನಿಖರ ಮಾಹಿತಿ ಕಲೆ ಹಾಕಲು ಸರ್ವೆ ನಡೆಸಲಿದೆ ಬಿಬಿಎಂಪಿ

ಡ್ರೋನ್‌ ಬಳಕೆಗೆ ಅನುಮತಿ ಕೋರಿದ ಪಾಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ 198 ವಾರ್ಡ್‌ಗಳಲ್ಲಿ ಡ್ರೋನ್‌ ಬಳಸಿ ಆಸ್ತಿಗಳ ಸರ್ವೆ ನಡೆಸಲು ಬಿಬಿಎಂಪಿ ಮುಂದಾಗಿದೆ. ಕೆಲವು ವಾರ್ಡ್‌ಗಳಲ್ಲಿ ಡ್ರೋನ್‌ ಬಳಸಿ ಪ್ರಾಯೋಗಿಕವಾಗಿ ಸರ್ವೆ ನಡೆಸಲು ಅನುಮತಿ ನೀಡುವಂತೆ ಕೋರಿ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಗರ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದಾರೆ.

ಮಾರತಹಳ್ಳಿ (3.07 ಚ.ಕಿ.ಮೀ), ಚಿಕ್ಕಪೇಟೆ (0.71 ಚ.ಕಿ.ಮೀ), ರಾಧಾಕೃಷ್ಣ ದೇವಸ್ಥಾನ (2ಚ.ಕಿ.ಮೀ), ಯಲಚೇನಹಳ್ಳಿ (1.59 ಚ.ಕಿ.ಮೀ), ನಾಗಪುರದ (1.78 ಚ.ಕಿ.ಮೀ) ಒಟ್ಟು 9.15 ಚ.ಕಿ.ಮೀ ಪ್ರದೇಶದಲ್ಲಿ ಡ್ರೋನ್‌ ಬಳಸಿ ಪ್ರಾಯೋಗಿಕ ಸರ್ವೆ ನಡೆಸಲಾಗುತ್ತಿದೆ.

‘ಆಸ್ತಿ ತೆರಿಗೆ ಮೌಲ್ಯಮಾಪನಕ್ಕಾಗಿ ಕಟ್ಟಡಗಳ ಸರ್ವೆ ನಡೆಸುವಾಗ ಭೌಗೋಳಿಕವಾಗಿ ಅತ್ಯಂತ ನಿಖರವಾದ ಮಾಹಿತಿ ಕಲೆಹಾಕಲು ಉದ್ದೇಶಿಸಿದ್ದೇವೆ. ನಿಯೋಜಿತ ಸಂಸ್ಥೆಯು ಕಟ್ಟಡಗಳ 3 ಆಯಾಮಗಳ ಹಾಗೂ 2 ಆಯಾಮಗಳ ನಕ್ಷೆಯನ್ನು ಸಿದ್ಧಪಡಿಸಲು ಕಟ್ಟಡ ಯಾವ ರಸ್ತೆಯ ಪಕ್ಕದಲ್ಲಿದೆ, ಎಷ್ಟು ಎತ್ತರವಿದೆ, ಅದರ ವಿಸ್ತೀರ್ಣ ಎಷ್ಟು ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಲು ಡ್ರೋನ್‌ ಬಳಸಲಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಪೊಲೀಸ್‌ ಕಮಿಷನರ್‌ ಅವರಿಂದ ಅನುಮತಿ ಸಿಕ್ಕ ತಕ್ಷಣವೇ ಸರ್ವೆ ಆರಂಭವಾಗಲಿದೆ. ಈ ಸರ್ವೆ ಮೂಲಕ ಸಂಗ್ರಹಿಸುವ  ಆಸ್ತಿಗಳ ವಿವರಗಳು ತೆರಿಗೆ ಸಂಗ್ರಹ ವ್ಯವಸ್ಥೆ ಸುಧಾರಿಸಲು ನೆರವಾಗಲಿದೆ ಎಂದು ಪ್ರಸಾದ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು