ಗುರುವಾರ , ಮಾರ್ಚ್ 30, 2023
24 °C
ಆಂಧ್ರಪ್ರದೇಶದ ಇಬ್ಬರನ್ನು ಬಂಧಿಸಿದ ಪೊಲೀಸರು

ಹಂದಿ ಸಾಕಾಣಿಕೆ ಜೊತೆಯಲ್ಲೇ ಗಾಂಜಾ ದಂಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಂಧ್ರಪ್ರದೇಶದಿಂದ ನಗರಕ್ಕೆ ಗಾಂಜಾ ತಂದು ಮಾರುತ್ತಿದ್ದ ಆರೋಪದಡಿ ಇಬ್ಬರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಎ.ವಿಜಯ್ (23) ಹಾಗೂ ಶಿವಕುಮಾರ್ (37) ಬಂಧಿತರು. ಅವರಿಂದ 75 ಕೆ.ಜಿ 760 ಗ್ರಾಂ ಗಾಂಜಾ, ಮೊಬೈಲ್ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಠಾಣೆ ವ್ಯಾಪ್ತಿಯ ಲೊಟ್ಟೆಗೊಲ್ಲಹಳ್ಳಿ ರೈಲ್ವೆ‌ ನಿಲ್ದಾಣ ಬಳಿ ಮಾದಕ ವಸ್ತು ವ್ಯಸನಿಯೊಬ್ಬ ಗಸ್ತು ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಣೆ ನಡೆಸಿದಾಗ, ಮಾಹಿತಿ ಲಭ್ಯವಾಗಿತ್ತು.’

ಹಂದಿ ಸಾಕಾಣಿಕೆ: ‘ಆರೋಪಿ ವಿಜಯ್, ತನ್ನ ಊರಿನಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿದ್ದ. ಆಂಧ್ರಪ್ರದೇಶದ ಗಡಿಭಾಗದ ಹಳ್ಳಿಗಳಲ್ಲಿ ಬೆಳೆಯುತ್ತಿದ್ದ ಗಾಂಜಾವನ್ನು ಖರೀದಿಸಿ ತಂದು, ಸರಕು ಸಾಗಾಣಿಕೆ ವಾಹನದ ಚಾಲಕರಿಗೆ ಹೆಚ್ಚಿನ ಹಣ ಕೊಟ್ಟು, ರಾಷ್ಟ್ರೀಯ ಹೆದ್ದಾರಿ ಮೂಲಕ ಗಾಂಜಾವನ್ನು ಬೆಂಗಳೂರಿಗೆ ತರುತ್ತಿದ್ದ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು