ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆಯಲ್ಲಿ ಡ್ರಗ್ಸ್ ಬಚ್ಚಿಟ್ಟು ತಂದು ಮಾರಾಟ

ವ್ಯಾಪಾರಿ ಬಂಧಿಸಿದ ಗಿರಿನಗರ ಪೊಲೀಸರು
Last Updated 20 ಜುಲೈ 2021, 19:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜಸ್ಥಾನದಿಂದ ಬಟ್ಟೆಗಳಲ್ಲಿ ಮಾದಕ ವಸ್ತು (ಡ್ರಗ್ಸ್) ಬಚ್ಚಿಟ್ಟುಕೊಂಡು ತಂದು ನಗರದಲ್ಲಿ ಮಾರುತ್ತಿದ್ದ ಆರೋಪದಡಿ ಭಾಗೀರಥಿ ದೇವಾಸಿ (44) ಎಂಬಾತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

‘ರಾಜಸ್ಥಾನದ ಆರೋಪಿ, ನಗರದ ಬಾಗಲೂರಿನ ಪರ್ವತಪುರ ರಸ್ತೆಯಲ್ಲಿ ವಾಸವಿದ್ದ. ಆತನಿಂದ ₹ 10 ಲಕ್ಷ ಮೌಲ್ಯದ 2 ಕೆ.ಜಿ 140 ಗ್ರಾಂ ಅಫೀಮು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬನಶಂಕರಿ 3ನೇ ಹಂತದಲ್ಲಿರುವ ವೀರಭದ್ರನಗರದ 100 ಅಡಿ ರಸ್ತೆ ಬಳಿ ಆರೋಪಿ ಅಫೀಮು ಮಾರಲು ಬಂದಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆತನನ್ನು ಬಂಧಿಸಲಾಯಿತು. ಆರೋಪಿಯ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಅಫೀಮು ಇತ್ತು’ ಎಂದೂ ತಿಳಿಸಿದರು.

ಬಟ್ಟೆ ವ್ಯಾಪಾರಿ: ‘ಬಂಧಿತ ಬಟ್ಟೆ ವ್ಯಾಪಾರಿ. ರಾಜಸ್ಥಾನದಿಂದ ಬಟ್ಟೆಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಪೆಡ್ಲರೊಬ್ಬರ ಪರಿಚಯ ಮಾಡಿಕೊಂಡಿದ್ದ ಆರೋಪಿ, ಡ್ರಗ್ಸ್ ಮಾರಾಟ ಮಾಡಲಾರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಬಟ್ಟೆಗಳಲ್ಲಿ ಮಾದಕ ವಸ್ತು ಬಚ್ಚಿಟ್ಟು ರಾಜಸ್ಥಾನದಿಂದ ನಗರಕ್ಕೆ ಕಳುಹಿಸಲಾಗುತ್ತಿತ್ತು. ಅದನ್ನು ಪಡೆಯುತ್ತಿದ್ದ ಆರೋಪಿ, ಸಣ್ಣ ಪೊಟ್ಟಣಗಳಲ್ಲಿ ಅಫೀಮು ತುಂಬುತ್ತಿದ್ದ. ಬಟ್ಟೆ ವ್ಯಾಪಾರ ಸೋಗಿನಲ್ಲಿ ಹಲವೆಡೆ ಸುತ್ತಾಡಿ ಅಫೀಮು ಮಾರುತ್ತಿದ್ದ. ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಕಂಪನಿ ಉದ್ಯೋಗಿಗಳು ಆತನ ಬಳಿ ಅಫೀಮು ಖರೀದಿಸುತ್ತಿದ್ದರು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT