ಬೆಂಗಳೂರು: ಪೂರ್ವ ವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ದ್ರವ್ಯಗಳ ತಯಾರಿಕೆ, ಸಂಗ್ರಹಣೆ, ಸಾಗಣೆ ಹಾಗೂ ಮಾರಾಟ ತಡೆಯುವ ಸಲುವಾಗಿ ಪೊಲೀಸರು ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿದರು.

ಕಾರ್ಯಾಚರಣೆಯಲ್ಲಿ ಒಟ್ಟು 45 ಕಾರ್ಖಾನೆಗಳು, 165 ವರ್ಕ್ ಶಾಪ್ಗಳು ಮತ್ತು 116 ಗೋದಾಮುಗಳ ತಪಾಸಣೆ ಮತ್ತು ಶೋಧ ನಡೆಸಿ, ಮಾಲೀಕರಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ದಾಖಲೆಗಳ ಪರಿಶೀಲನೆ ಮಾಡಲಾಯಿತು.

ಮಾದಕ ದ್ರವ್ಯಗಳ ತಯಾರಿಕೆ, ಸಂಗ್ರಹಣೆ, ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳು ಕಂಡು ಬಂದಲ್ಲಿ, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ನಗರದ ನಿರ್ಜನ ಪ್ರದೇಶಗಳು, ಪಾಳು ಬಿದ್ದ ಮನೆಗಳು ಸೇರಿ ಹಲವೆಡೆ ಸಿಸಿಬಿಯ ಆರು ಘಟಕಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಔಷಧ ಅಂಗಡಿ, ಹಳೆ ಗೋದಾಮುಗಳು, ಸಣ್ಣ ಅಂಗಡಿಗಳು, ವಸತಿ ಗೃಹ, ಪೇಯಿಂಗ್ ಗೆಸ್ಟ್ (ಪಿ.ಜಿ), ರೌಡಿಶೀಟರ್ಗಳ ಮನೆಗಳು ಸೇರಿ ಅನುಮಾನಾಸ್ಪದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಮಾದಕ ಪದಾರ್ಥಗಳು ಪತ್ತೆಯಾದರೆ ಸ್ಥಳೀಯ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ.

ಕಳ್ಳತನ, ದರೋಡೆ ಹಾಗೂ ಇತರೆ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೂರ್ವ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ ಆಭರಣ ಅಂಗಡಿಗಳಿಗೆ ಪೊಲೀಸರು ಭೇಟಿ ನೀಡಿ, ಭದ್ರತಾ ಪರಿಶೀಲನೆ ಹಾಗೂ ಮಾಲೀಕರೊಂದಿಗೆ ಸಭೆ ನಡೆಸಿದರು. ಒಟ್ಟು 228 ಆಭರಣ ಅಂಗಡಿಗಳ ಪರಿಶೀಲನೆ ನಡೆಸಲಾಯಿತು.

ಭದ್ರತಾ ಸಿಬ್ಬಂದಿಯ ವಿಳಾಸ ತಿಳಿದುಕೊಂಡಿರಬೇಕು, ಸಿ.ಸಿ.ಟಿ.ವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಬೇಕು ಹಾಗೂ ಭದ್ರತಾ ವ್ಯವಸ್ಥೆ ಸರಿಯಾಗಿರಬೇಕು ಎಂದು ಮಾಲೀಕರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.