ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ ಕೊಠಡಿಯಲ್ಲಿ ಡ್ರಗ್ಸ್ ಪಾರ್ಟಿ: ನಾಲ್ವರ ಬಂಧನ

Last Updated 10 ಫೆಬ್ರುವರಿ 2021, 18:50 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ.ನಗರದ ಹೋಟೆಲೊಂದರಲ್ಲಿ ಕೊಠಡಿಗಳನ್ನು ಕಾಯ್ದಿರಿಸಿ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದ ಆರೋಪದಡಿ ವಿದೇಶಿ ಪ್ರಜೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

‘ಫ್ರೇಜರ್‌ಟೌನ್‌ ನಿವಾಸಿ ಮೊಹಮ್ಮದ್ ಮುಜಾಮಿಲ್ (27), ಜೆ.ಪಿ.ನಗರದ ಸಂತೃಪ್ತಿ ಲೇಔಟ್‌ನ ರವಿಕುಮಾರ್ ಅಲಿಯಾಸ್ ಬಿಡಿಎ ರವಿ (46), ಮೈಸೂರು ರಾಜೀವ್ ನಗರದ ಸೈಯದ್ ಶೋಯಬುದ್ದಿನ್ (27) ಹಾಗೂ ಐವರಿ ಕೋಸ್ಟ್‌ದ ಡೊಸ್ಸೊ ಖಲಿಫ್ (27) ಬಂಧಿತರು. ಅವರಿಂದ ₹ 2.40 ಲಕ್ಷ ಮೌಲ್ಯದ ಡ್ರಗ್ಸ್, 6 ಮೊಬೈಲ್‌ಗಳು ಹಾಗೂ ₹ 96,650 ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶ್ರೀಲಂಕಾದ ’ಅಮೋಸ್’ ಟೂರಿಸ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಮುಜಾಮಿಲ್, ಪ್ರವಾಸ ಹಾಗೂ ಕ್ಯಾಸಿನೊಗೆ ಬರುತ್ತಿದ್ದ ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಕೊರೊನಾ ಸೊಂಕು ಹರಡುವಿಕೆ ವೇಳೆ ಆತ, ಬೆಂಗಳೂರಿಗೆ ವಾಪಸು ಬಂದಿದ್ದ. ಬಿಡಿಎನಲ್ಲಿ ಮಧ್ಯವರ್ತಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಹಾಗೂ ಸ್ನೇಹಿತ ಶೋಯಬುದ್ದಿನ್ ಜೊತೆ ಸೇರಿ ಡ್ರಗ್ಸ್ ಮಾರಾಟಕ್ಕೆ ಸಂಚು ರೂಪಿಸಿದ್ದ.’

‘2015ರಲ್ಲಿ ಕ್ರೀಡಾ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಡೊಸ್ಸೊ ಖಲಿಫ್, ವೀಸಾ ಅವಧಿ ಮುಗಿದರೂ ತನ್ನ ದೇಶಕ್ಕೆ ವಾಪಸು ಹೋಗಿರಲಿಲ್ಲ. ಆತನ ಜೊತೆ ಒಡನಾಟವಿಟ್ಟುಕೊಂಡಿದ್ದ ಮುಜಾಮಿಲ್, ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ’ ಎಂದೂ ಪೊಲೀಸರು ತಿಳಿಸಿದರು.

ಪ್ರತಿ ಶುಕ್ರವಾರ ಪಾರ್ಟಿ

’ಪ್ರತಿ ಶುಕ್ರವಾರದಂದು ಜೆ.ಪಿ.ನಗರದ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸುತ್ತಿದ್ದ ಆರೋಪಿಗಳು, ಅಲ್ಲಿಯೇ ಡ್ರಗ್ಸ್ ಪಾರ್ಟಿ ಆಯೋಜಿಸಿ ಸೇವನೆ ಮಾಡುತ್ತಿದ್ದರು. ಕೆಲ ಗ್ರಾಹಕರನ್ನೂ ಪಾರ್ಟಿಗೆ ಆಹ್ವಾನಿಸಿ, ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಆರೋಪಿ ಡೊಸ್ಸೊ ವಿರುದ್ಧ ಕೋಣನಕುಂಟೆ ಹಾಗೂ ಬಾಗಲೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಜಾಲದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT