ಬೆಂಗಳೂರು: ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆಯ ದರ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ₹6ಕ್ಕೆ ಮಾರಾಟವಾಗುತ್ತಿದ್ದ ಒಂದು ಮೊಟ್ಟೆ ಈಗ ₹8ಕ್ಕೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಮೊಟ್ಟೆಗೆ ಹೆಚ್ಚು ಬೇಡಿಕೆ ಇರುತ್ತದೆ. ಇದರಿಂದ ಮಾರಾಟ ಹೆಚ್ಚಾಗುವ ಜೊತೆಗೆ ದರವೂ ಏರಿಕೆಯಾಗುತ್ತದೆ. ಕಳೆದ ಕೆಲ ದಿನಗಳಿಂದ ಮೊಟ್ಟೆಯ ದರ ಏರಿಕೆಯಾಗುತ್ತಿದೆ. ನಗರದ ವಿವಿಧ ಮಾಲ್ ಹಾಗೂ ಆನ್ಲೈನ್ ಖರೀದಿ ವೇದಿಕೆಗಳಲ್ಲಿ ಒಂದು ಮೊಟ್ಟೆ ದರ ₹6.95 ರಿಂದ ₹7.50 ಇದೆ. ನಗರದ ವಿವಿಧ ಪ್ರದೇಶಗಳ ಕಿರಾಣಿ ಅಂಗಡಿಗಳಲ್ಲಿ ₹7.50ರಿಂದ ₹8ಕ್ಕೆ ಮಾರಾಟವಾಗುತ್ತಿದೆ.

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಕೇಕ್ ತಯಾರಿಸಲು ಮೊಟ್ಟೆಯನ್ನು ಬಳಸಲಾಗುತ್ತದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆಯಾಗದ ಕಾರಣ ದರ ಹೆಚ್ಚಳವಾಗಿದೆ. ಜೊತೆಗೆ ಕಳೆದ ವರ್ಷ ಹಕ್ಕಿ ಜ್ವರ ಬಂದಿದ್ದರಿಂದ ಕೋಳಿಗಳ ಸಾಕಾಣಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮೊಟ್ಟೆಗಳ ಕೊರತೆ ಉಂಟಾಗಿದೆ ಎಂದು ಮೊಟ್ಟೆ ವ್ಯಾಪಾರಸ್ಥರು ತಿಳಿಸಿದರು.

‘ರಾಜ್ಯದಲ್ಲಿ ನಿತ್ಯ 2.20 ಕೋಟಿ ಮೊಟ್ಟೆ ಉತ್ಪಾದನೆ ಆಗುತ್ತದೆ. ಇದರಲ್ಲಿ ಗೋವಾ, ಮಹಾರಾಷ್ಟ್ರ, ಕೇರಳಕ್ಕೆ ಪೂರೈಸಲಾಗುತ್ತದೆ. ಮೊಟ್ಟೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ನಿತ್ಯ 11 ಲಕ್ಷ ಮೊಟ್ಟೆ ಬಳಕೆಯಾಗುತ್ತದೆ. ಇದರ ಜೊತೆಗೆ ತಮಿಳುನಾಡಿನ ನಾಮಕ್ಕಲ್ನಿಂದ ರಾಜ್ಯಕ್ಕೆ ಸುಮಾರು 50 ಲಕ್ಷ ಮೊಟ್ಟೆಗಳ ಪೂರೈಕೆ ಆಗುತ್ತಿತ್ತು. ಈಗ ಅದು ಕಡಿಮೆ ಆಗಿದೆ’ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್ಇಸಿಸಿ) ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ಶೇಷನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊಟ್ಟೆ ದರ ಏರಿಕೆಯಿಂದ ಹೋಟೆಲ್ ಮತ್ತು ಬೇಕರಿ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದು, ದರ ನಿಯಂತ್ರಣವಾಗದಿದ್ದರೆ ಕೇಕ್ ದರವೂ ಹೆಚ್ಚಾಗಲಿದೆ’ ಎಂದು ಶೇಷಾದ್ರಿಪುರದ ಬೇಕರಿ ವ್ಯಾಪಾರಿಯೊಬ್ಬರು ತಿಳಿಸಿದರು.

ರಾಜ್ಯದಲ್ಲಿ ನಿತ್ಯ 2.20 ಕೋಟಿ ಮೊಟ್ಟೆ ಉತ್ಪಾದನೆ

ತಮಿಳುನಾಡಿನ ನಾಮಕ್ಕಲ್ನಿಂದ ಬೆಂಗಳೂರಿಗೆ ನಿತ್ಯ 45 ಲಕ್ಷ ಪೂರೈಕೆ

ಚಳಿಗಾಲದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಳ

ಮೊಟ್ಟೆ ದರ ಏರಿಕೆಯಿಂದಾಗಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮೊಟ್ಟೆ ವಿತರಿಸಲು ಕಷ್ಟವಾಗುತ್ತಿದೆ
ಎಂ. ಜಯಮ್ಮ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ

‘ನಿತ್ಯ 1 ಕೋಟಿ ಮೊಟ್ಟೆ ರಫ್ತು’

‘ತಮಿಳುನಾಡಿನ ನಾಮಕ್ಕಲ್ನಿಂದ ನಿತ್ಯ 1 ಕೋಟಿಗೂ ಹೆಚ್ಚು ಮೊಟ್ಟೆಗಳನ್ನು ಅಮೆರಿಕ ದುಬೈ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನಾಮಕ್ಕಲ್ನಿಂದ ಬೆಂಗಳೂರಿಗೆ ನಿತ್ಯ 45 ಲಕ್ಷ ಮೊಟ್ಟೆ ಪೂರೈಕೆ ಮಾಡಲಾಗುತ್ತಿತ್ತು. ಚಳಿಗಾಲದಲ್ಲಿ ಮೊಟ್ಟೆ ಇಳುವರಿ ಪ್ರಮಾಣ ಕಡಿಮೆಯಾಗಿದೆ’ ಎಂದು ಶೇಷನಾರಾಯಣ ಅವರು ಹೇಳಿದರು. ‘ಸದ್ಯ ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ₹6.75ರಂತೆ ಮಾರಾಟವಾಗುತ್ತಿದೆ. ಸಂಕ್ರಾಂತಿ ವೇಳೆಗೆ ಹಾಗೂ ರಫ್ತು ಮಾಡುವ ಪ್ರಮಾಣ ಕಡಿಮೆಯಾದರೆ ಮೊಟ್ಟೆ ದರ ಇಳಿಕೆ ಆಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.