ಬೆಂಗಳೂರು: ಹಿರಿಯ ಪತ್ರಕರ್ತರ ವೇದಿಕೆಗೆ 2024–2029ನೇ ಸಾಲಿಗೆ ಕಾರ್ಯಾಧ್ಯಕ್ಷರಾಗಿ ಎಂ.ಎ.ಪೊನ್ನಪ್ಪ, ಅಧ್ಯಕ್ಷರಾಗಿ ಆರ್.ಪಿ. ಸಾಂಬಸದಾಶಿವ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಬಿ.ಸೋಮಸುಂದರ ರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್.ರಾಜೇಂದ್ರಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಎಸ್.ಆರ್.ವೆಂಕಟೇಶ್ ಪ್ರಸಾದ್, ಖಜಾಂಚಿಯಾಗಿ ನಾರಾಯಣ್ ಬಿ. ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಂ. ನಾಗರಾಜ, ಶಿವಾಜಿ ಗಣೇಶನ್, ಕೆ.ಎ. ರಾಮಕೃಷ್ಣಮೂರ್ತಿ, ಎಂ.ಕೆ. ಚಂದ್ರಬೋಸ್, ಆದಿನಾರಾಯಣಮೂರ್ತಿ ಆಯ್ಕೆಯಾಗಿದ್ದಾರೆ ಎಂದು ಹಿರಿಯ ಪತ್ರಕರ್ತರ ವೇದಿಕೆಯ ಪ್ರಕಟಣೆ ತಿಳಿಸಿದೆ.