ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯಿಂದ ಬೇರ್ಪಟಿದ್ದ ಮರಿಯಾನೆ ಸಾವು

Last Updated 3 ಏಪ್ರಿಲ್ 2020, 22:11 IST
ಅಕ್ಷರ ಗಾತ್ರ

ಆನೇಕಲ್: ತಾಯಿಯಿಂದ ಬೇರ್ಪಟ್ಟು ಒಂದು ತಿಂಗಳಿನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೈಕೆಯಲ್ಲಿದ್ದ ಮರಿಯಾನೆ ಸರಸ್ವತಿ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.

ಮಾರ್ಚ್‌ 3ರಂದು ಆನೆ ಹಿಂಡಿನಿಂದ ಬೇರ್ಪಟ್ಟು ರಾಗಿಹಳ್ಳಿ ಸಮೀಪ ಈ ಮರಿಯಾನೆ ಕಾಣಿಸಿಕೊಂಡಿತ್ತು. ಸಂರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಮರಿಯಾನೆ ಕೆಲ ದಿನಗಳಿಂದ ಅತಿಸಾರ ಬೇಧಿಯಿಂದ ಬಳಲುತ್ತಿತ್ತು. ಗುರುವಾರ ರಾತ್ರಿ ಹೊಟ್ಟನೋವು ಮತ್ತು ಅತಿಸಾರ ಬೇಧಿ ಹೆಚ್ಚಾಗಿತ್ತು. ಬನ್ನೇರುಘಟ್ಟದ ಜೈವಿಕ ಉದ್ಯಾನದ ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

ಆನೆ ಮರಿಯನ್ನು ಉಳಿಸಿಕೊಳ್ಳುವ ಸಂಬಂಧ ಸ್ವತಃ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಮೂರು ಬಾರಿ ಉದ್ಯಾನಕ್ಕೆ ಭೇಟಿ ನೀಡಿ ಜತನದಿಂದ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದರು. ತಾಯಿಯೊಂದಿಗೆ ಸೇರಿಸುವ ಪ್ರಯತ್ನ ಸಹ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT