ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಿಗ್‌ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯಕ್ಕೆ ಆಗ್ರಹ

Published 9 ಜುಲೈ 2024, 15:36 IST
Last Updated 9 ಜುಲೈ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ಗಿಗ್‌ ಕ್ಷೇತ್ರದ ಕಾರ್ಮಿಕರಿಗೆ ಕಾರ್ಮಿಕರ ರಾಜ್ಯ ವಿಮಾ ನಿಗಮದಿಂದ ವಿಮೆ (ಇಎಸ್‌ಐ) ಮತ್ತು ಭವಿಷ್ಯನಿಧಿ (ಪಿಎಫ್‌) ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಯುನೈಟೆಡ್‌ ಫುಡ್ ಡೆಲಿವರಿ ಪಾರ್ಟ್‌ನರ್ಸ್‌ ಯೂನಿಯನ್ ಅಧ್ಯಕ್ಷ ವಿನಯ್‌ ಸಾರಥಿ ಒತ್ತಾಯಿಸಿದ್ದಾರೆ.


ಗಿಗ್‌ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯ ಪ್ರಸ್ತಾವವಿರುವ ‘ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ–2024’ರ ಕರಡನ್ನು ಜೂನ್‌ 28ರಂದು ಪ್ರಕಟಿಸಿರುವ ಕಾರ್ಮಿಕ ಇಲಾಖೆ, ಸಲಹೆಗ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸಂಘಟನೆಯು,  ‘ಗಿಗ್ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಚಿವರು, ಅಧಿಕಾರಿಗಳ ಜೊತೆಗೆ ಗಿಗ್‌ ಕಾರ್ಮಿಕರು ಮತ್ತು ಅಗ್ರಿಗೇಟರ್‌ಗಳ ತಲಾ ಐವರು ಸದಸ್ಯರು ಇರುವ ಸಮಿತಿ ರಚಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕರು ದೂರು ನೀಡಲು ಅವಕಾಶ ಕಲ್ಪಿಸಲು ಕಾರ್ಮಿಕ ಅಧಿಕಾರಿಗಳನ್ನು ಕುಂದುಕೊರತೆ ಪರಿಹಾರ ಅಧಿಕಾರಿಯಾಗಿ ನೇಮಿಸಬೇಕು’ಎಂದು ಒತ್ತಾಯಿಸಿದೆ.

ಅಗ್ರಿಗೇಟರ್‌ಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಮುನ್ನ ಕಾರ್ಮಿಕರಿಗೂ ಪ್ರತಿವಾದ ಮಾಡಲು ನ್ಯಾಯಸಮ್ಮತವಾದ ಅವಕಾಶ ಕಲ್ಪಿಸಬೇಕು. ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸುವ ಪ್ರಬಲ ಕಾನೂನು ಜಾರಿಯಾಗಲಿ ಎಂದು ವಿನಯ್‌ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT