ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊರೆಸ್ವಾಮಿ ಪ್ರತಿಷ್ಠಾನ ಸ್ಥಾಪನೆ: ಅಭಿಮಾನಿಗಳು, ಅನುಯಾಯಿಗಳ ಸಭೆಯಲ್ಲಿ ತೀರ್ಮಾನ

Published 31 ಆಗಸ್ಟ್ 2024, 15:25 IST
Last Updated 31 ಆಗಸ್ಟ್ 2024, 15:25 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನೆನಪನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಉದ್ದೇಶದಿಂದ ‘ಎಚ್.ಎಸ್.ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನʼ ಎಂಬ ಸಂಸ್ಥೆ ಸ್ಥಾಪಿಸಲು ನಿರ್ಧರಿಸಲಾಯಿತು.

ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ದೊರೆಸ್ವಾಮಿ ಅವರ ಅಭಿಮಾನಿಗಳು-ಅನುಯಾಯಿಗಳ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸೌಹಾರ್ದ-ಸಹಬಾಳ್ವೆ, ಅಂತ್ಯೋದಯ-ಸರ್ವೋದಯ, ಪರಿಸರ ಸಂರಕ್ಷಣೆ, ಸಂವಿಧಾನ-ಪ್ರಜಾಪ್ರಭುತ್ವದ ರಕ್ಷಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ದೊರೆಸ್ವಾಮಿ ಅವರು ದಣಿವರಿಯದ ಹೋರಾಟ ನಡೆಸಿದ್ದರು. ಅವರ ಸ್ವಾತಂತ್ರ್ಯ ಚಳವಳಿಯ ನೈಜ ಇತಿಹಾಸವನ್ನು ಶಾಲಾ-ಕಾಲೇಜುಗಳ ಮೂಲಕ ಯುವಜನರಿಗೆ ಪರಿಚಯಿಸುವಂತೆ ಹಲವರು ಸಲಹೆ ನೀಡಿದರು. 

ಬೆಂಗಳೂರಿನ ಯಾವುದಾದರೊಂದು ಪ್ರಮುಖ ರಸ್ತೆ ಅಥವಾ ಮೆಟ್ರೊ ನಿಲ್ದಾಣಕ್ಕೆ ದೊರಸ್ವಾಮಿ ಅವರ ಹೆಸರಿಡಬೇಕು, ಸ್ವಾತಂತ್ರ್ಯ ಉದ್ಯಾನದಲ್ಲಿ ಅವರ ಹೆಸರಿನಲ್ಲಿ ವಿವಿಧೋದ್ದೇಶ ಕೇಂದ್ರ ಸ್ಥಾಪಿಸಬೇಕು, ಬೆಂಗಳೂರು ವಿ.ವಿ. ಗಾಂಧಿ ಅಧ್ಯಯನ ಕೇಂದ್ರದಲ್ಲಿ ಅವರ ಹೆಸರಲ್ಲಿ ದತ್ತಿ ಸ್ಥಾಪಿಸಬೇಕು, ಅವರ ಬರಹ-ಭಾಷಣಗಳನ್ನು ಪುಸ್ತಕಗಳಾಗಿ ಪ್ರಕಟಿಸುವ ಕೆಲಸ ಮಾಡಬೇಕು ಎಂದು ಸಭೆ ಸರ್ಕಾರವನ್ನು ಆಗ್ರಹಿಸಿತು. ಇದಕ್ಕಾಗಿ ಗಣ್ಯರ ನಿಯೋಗವೊಂದು ಶೀಘ್ರವೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಹೋರಾಟಗಾರ್ತಿಯರಾದ ಡಾ.ವಿಜಯಮ್ಮ, ಇಂದಿರಾ ಕೃಷ್ಣಪ್ಪ, ರೈತ ಚಳವಳಿಯ ವೀರಸಂಗಯ್ಯ ಮತ್ತು ಸಿದಗೌಡ ಮೋದಗಿ, ಡಾ. ವಸಂತಿ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT