ಬೆಂಗಳೂರು: ‘ಸುಪ್ರೀಂಕೋರ್ಟ್ ಸೂಚಿಸಿದ ನಂತರ ರಾಜ್ಯ ಸರ್ಕಾರ ದಯಾಮರಣಕ್ಕೆ ಕಾನೂನು ತಂದಿದ್ದರೂ ಈವರೆಗೂ ಮಾರ್ಗಸೂಚಿಗಳನ್ನು ರೂಪಿಸಿಲ್ಲ’ ಎಂದು ದಯಾಮರಣ ಹೋರಾಟಗಾರ್ತಿ ದಾವಣಗೆರೆಯ ಎಚ್.ಬಿ.ಕರಿಬಸಮ್ಮ ಅಸಮಾಧಾನ ವ್ಯಕ್ತಪಡಿಸಿದರು.

‘ದಯಾಮರಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ಆಸ್ಪತ್ರೆ ಸಂಪರ್ಕಿಸಬೇಕು ಎನ್ನುವ ಗೊಂದಲ ಜನರನ್ನು ಕಾಡುತ್ತಿದೆ. ದಯಾಮರಣ ಸಿಗದೇ ಹಲವರು ನರಳುತ್ತಲೇ ಜೀವ ಬಿಡುವ ಸನ್ನಿವೇಶವಿದೆ. ಕಾನೂನು ಜಾರಿ ವಿಚಾರದಲ್ಲಿ ಸರ್ಕಾರ ಆಸಕ್ತಿ ತೋರಿದರೂ ನಿಯಮಗಳನ್ನು ರೂಪಿಸುವಲ್ಲಿ ವಿಫಲವಾಗಿದೆ. ಇದಕ್ಕಾಗಿ ಹೋರಾಟ ಮಾಡಿದ ನಾನು ಜನರಿಗೆ ಉತ್ತರ ನೀಡುವ ಸನ್ನಿವೇಶ ನಿರ್ಮಾಣವಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನನಗೀಗ 86 ವರ್ಷ. ಎರಡು ದಶಕದಿಂದಲೂ ದಯಾಮರಣದ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದೇನೆ. ಅನೇಕ ರೋಗಗಳಿಂದ ನರಳಿ ನನಗೆ ಬದುಕು ಸಾಕಾಗಿದೆ. ರೋಗಗಳು ಉಲ್ಬಣಿಸಿ ಪರಾವಲಂಬಿಯಾಗಿ ಬದುಕುವ ಮುನ್ನವೇ ದೇಹದಲ್ಲಿ ಅಲ್ಪಸ್ವಲ್ಪ ಬಲ ಇರುವಾಗ ಕಾನೂನಾತ್ಮಕವಾಗಿಯೇ ಸಾವು ಬಯಸುತ್ತಿದ್ದೇನೆ. ಸರ್ಕಾರ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದಯಾಮರಣದ ಸೌಲಭ್ಯಗಳು ಸಿಗುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

ಬ್ಯಾಂಕ್ನ ನಿವೃತ್ತ ಉದ್ಯೋಗಿ ಕಲ್ಪನಾ ಮಾತನಾಡಿ, ಹಲವು ದೇಶಗಳಲ್ಲಿ ದಯಾಮರಣಕ್ಕೆ ವ್ಯವಸ್ಥೆಗಳಿವೆ. ವೈದ್ಯರ ಸಹಕಾರದೊಂದಿಗೆ ಜಾರಿಗೊಳಿಸಲು ಕಾನೂನು ರೂಪಿಸಲಾಗಿದೆ. ಭಾರತದಲ್ಲೂ ಇದನ್ನು ಜಾರಿಗೊಳಿಸಲು ಪ್ರಧಾನಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.