ಬೆಂಗಳೂರು: ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಆವಿಷ್ಕಾರ ಬ್ರದರ್ಸ್ ಬಯೊ ಮೆಡಿಕಲ್ ಕಂಪನಿ ಮಾಲೀಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

‘ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಮುಂದುವರಿಸಲಾಗಿದೆ. ಆವಿಷ್ಕಾರ ಬ್ರದರ್ಸ್ ಬಯೊ ಮೆಡಿಕಲ್ ಕಂಪನಿ ಮಾಲೀಕ ಲಕ್ಷ್ಮಣ ಗೌಡ ಹಾಗೂ ಸಿದ್ದೇಶ್ ಎಂಬುವವರನ್ನು ಸೆರೆ ಹಿಡಿಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಅಲ್ಟ್ರಾ ಸೌಂಡ್ ಹಾಗೂ ಇಮೇಜಿಂಗ್ ಸ್ಕ್ಯಾನಿಂಗ್ ಯಂತ್ರಗಳ ಮಾರಾಟ, ಮರು ಖರೀದಿ ಹಾಗೂ ದುರಸ್ತಿ ಸಂಬಂಧ ಆವಿಷ್ಕಾರ ಬ್ರದರ್ಸ್ ಬಯೊ ಮೆಡಿಕಲ್ ಕಂಪನಿಯವರು ಪರವಾನಗಿ ಪಡೆದಿದ್ದರು. ಪ್ರತಿಯೊಂದು ಸ್ಕ್ಯಾನಿಂಗ್ ಯಂತ್ರದ ಮಾರಾಟ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಕಂಪನಿ ಮಾಲೀಕ ಹಾಗೂ ಇತರರು ಮೂರು ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದರು.

‘ಅ.15ರಂದು ಒಂದು ಸ್ಕ್ಯಾನಿಂಗ್ ಯಂತ್ರವನ್ನು ಜಪ್ತಿ ಮಾಡಲಾಗಿತ್ತು. ಚನ್ನರಾಯಪಟ್ಟಣದಲ್ಲೂ ಭ್ರೂಣ ಹತ್ಯೆ ಸಂಬಂಧ ಪ್ರಕರಣ ದಾಖಲಾಗಿದ್ದು, ಮತ್ತೊಂದು ಯಂತ್ರವನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದೇಶನನ್ನು ಬಂಧಿಸಲಾಗಿದ್ದು, ಈತನ ಬಳಿಯೂ ಯಂತ್ರವೊಂದು ಸಿಕ್ಕಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಲಿಂಗ ಪತ್ತೆಗೆ ಯಂತ್ರ ಬಳಕೆ: ‘ಆರೋಪಿ ಲಕ್ಷ್ಮಣ ಗೌಡ ಬಳಿ ಯಂತ್ರ ಖರೀದಿಸಿದ್ದ ಕೆಲ ವೈದ್ಯರು ಹಾಗೂ ಇತರರು, ಅಕ್ರಮವಾಗಿ ಲಿಂಗ ಪತ್ತೆ ಮಾಡುತ್ತಿದ್ದರು. ಆಲೆಮನೆ ಹಾಗೂ ಕೆಲವರ ಮನೆಗಳಲ್ಲಿ ಯಂತ್ರಗಳು ಇದ್ದವು. ತಮ್ಮದೇ ಜಾಲದ ಸದಸ್ಯರಿಂದ ಗರ್ಭಿಣಿಯರನ್ನು ಕರೆಸಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಹೆಣ್ಣು ಭ್ರೂಣವೆಂಬುದು ಗೊತ್ತಾಗುತ್ತಿದ್ದಂತೆ ಹತ್ಯೆ ಮಾಡಲಾಗುತ್ತಿತ್ತು. ಇದೇ ಜಾಲ 900ಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.