ಗುರುವಾರ , ಮಾರ್ಚ್ 23, 2023
23 °C

ಅವಹೇಳನಕಾರಿ ಹೇಳಿಕೆ: ನಟ ಚೇತನ್ ವಿರುದ್ಧ ಎಫ್ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಕಾಂತಾರ ಸಿನಿಮಾ ಕುರಿತು ಮಾತನಾಡುವ ವೇಳೆ ದೈವಾರಾಧನೆ ಕುರಿತು ಅವಹೇಳನಕಾರಿ ಹೇಳಿಕೆ‌ ನೀಡಿದ್ದ' ಆರೋಪದಡಿ ನಟ ಚೇತನ್ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

'ಶಿವಕುಮಾರ್ ಎಂಬುವರು ನೀಡಿದ್ದ ದೂರು ಆಧರಿಸಿ ಆರೋಪಿ ಚೇತನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗೆ ನೋಟಿಸ್ ನೀಡಿ‌ ವಿಚಾರಣೆ ನಡೆಸಲಾಗುವುದು' ಎಂದು ಪೊಲೀಸರು ಹೇಳಿದರು.

'ಶೇಷಾದ್ರಿಪುರ ಠಾಣೆ ವ್ಯಾಪ್ತಿಯಲ್ಲಿ ಚೇತನ್ ವಾಸವಿದ್ದಾರೆ. ಜಾತಿ-ಧರ್ಮಗಳ ನಡುವೆ‌ ವೈಷಮ್ಯ‌ ಮೂಡಿಸುವ ಉದ್ದೇಶದಿಂದ ಇತ್ತೀಚೆಗೆ ಅವರು ಹೇಳಿಕೆ‌ ನೀಡಿದ್ದಾರೆ. ಧಾರ್ಮಿಕ‌ ನಂಬಿಕೆಗೆ ಧಕ್ಕೆ ತಂದಿದ್ದಾರೆ' ಎಂದು ದೂರಿ‌ನಲ್ಲಿ ಶಿವಕುಮಾರ್ ‌ಆರೋಪಿಸಿದ್ದಾರೆ. ದೂರಿಗೆ ಸಂಬಂಧಪಟ್ಟ ಕೆಲ ಪುರಾವೆಗಳನ್ನು ನೀಡಿದ್ದಾರೆ' ಎಂದು ಪೊಲೀಸರು ತಿಳಿಸಿದರು.

ಪ್ರತಿಭಟನೆ ನಡೆಸಿದ್ದವರ ಬಂಧನ: ಹೇಳಿಕೆ ಖಂಡಿಸಿ ಚೇತನ್ ಮನೆ ಎದುರು ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು