ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ಬೆಂಕಿ ಅವಘಡ: ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ

Published 4 ಜುಲೈ 2024, 16:25 IST
Last Updated 4 ಜುಲೈ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣಮಟ್ಟ ಖಾತರಿ ‍ಪ್ರಯೋಗಾಲಯದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಮೃತಪಟ್ಟ ಮುಖ್ಯ ಎಂಜಿನಿಯರ್‌ ಸಿ.ಎಂ. ಶಿವಕುಮಾರ್‌ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಹಾಗೂ ಅವರ ಕುಟುಂಬದವರಿಗೆ ಉದ್ಯೋಗ ನೀಡುವ ಪ್ರಸ್ತಾವಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಬೆಂಕಿ ಅವಘಡದಲ್ಲಿ ತೀವ್ರ ಗಾಯಗೊಂಡವರಿಗೂ ಪರಿಹಾರ ಧನವನ್ನು ಇಲಾಖೆಯ ಸಚಿವರ ಅನುಮೋದನೆಯೊಂದಿಗೆ ನಿರ್ಧರಿಸಲಾಗುತ್ತದೆ ಎಂದು  ಎಂದು ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಗುಣಮಟ್ಟ ಖಾತರಿ ಪ್ರಯೋಗಾಲಯದಲ್ಲಿ 2023ರ ಆಗಸ್ಟ್‌ 11ರಂದು ಬಿಟುಮಿನ್‌ ಪರೀಕ್ಷೆ ಮಾಡುವಾಗ, ಬೆಂಜೀನ್‌ ಹಾಕಿ, ಸ್ವಚ್ಛಗೊಳಿಸುವ ಸಂದರ್ಭದಲ್ಲಿ ರಾಸಾಯನಿಕ ಸೋರಿ ಬೆಂಕಿ ಕಾಣಿಸಿಕೊಂಡಿತ್ತು.  ಅದು ಬೃಹತ್ ಪ್ರಮಾಣದಲ್ಲಿ ಹರಡಿಕೊಂಡಿದ್ದರಿಂದ ಒಂಬತ್ತು ಸಿಬ್ಬಂದಿಗೆ ಕೂಡಲೇ ಹೊರಬರಲು ಸಾಧ್ಯವಾಗಿರಲ್ಲ.

ಬೆಂಕಿ ಅವಘಡದಲ್ಲಿ ಶೇ 25ರಷ್ಟು ಗಾಯಗೊಂಡಿದ್ದ ಸಿ.ಎಂ. ಶಿವಕುಮಾರ್‌ (45) ಅವರು 20 ದಿನಗಳ ಬಳಿಕ ಆ.30ರಂದು ಅಪೊಲೊ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT