ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಪ್ಪನ ಅಗ್ರಹಾರದ ಬಳಿಯ ಬೇಕರಿಯಲ್ಲಿ ಅಗ್ನಿ ಅವಘಡ: ಇಬ್ಬರಿಗೆ ಗಾಯ

Published : 1 ಅಕ್ಟೋಬರ್ 2024, 20:17 IST
Last Updated : 1 ಅಕ್ಟೋಬರ್ 2024, 20:17 IST
ಫಾಲೋ ಮಾಡಿ
Comments

ಬೆಂಗಳೂರು: ಪರಪ್ಪನ ಅಗ್ರಹಾರದ ಬಳಿಯ ಹರಳೂರು ರಸ್ತೆಯ ಬೇಕರಿಯಲ್ಲಿ ಸೋಮವಾರ ರಾತ್ರಿ ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅನಾಹುತ ಸಂಭವಿಸಿದ್ದು, ಇಬ್ಬರು ಕೆಲಸಗಾರರು ಗಾಯಗೊಂಡಿದ್ದಾರೆ.

ಗಿರೀಶ್ ಮತ್ತು ಪಪ್ಪು ಗಾಯಗೊಂಡಿದ್ದಾರೆ.

‘ಬೇಕರಿಯ ವಹಿವಾಟು ಮುಗಿದ ನಂತರ ರಾತ್ರಿ 11 ಗಂಟೆಗೆ ಗಿರೀಶ್ ಮತ್ತು ಪಪ್ಪು, ಬಾಗಿಲು ಮುಚ್ಚಿ ಮನೆಗೆ ಹೊರಟಿದ್ದರು. ಆಗ ಪಕ್ಕದ ಅಂಗಡಿಯವರು ಬೇಕರಿಯ ಒಳ ಭಾಗದಿಂದ ಅಡುಗೆ ಅನಿಲದ ವಾಸನೆ ಬರು
ತ್ತಿದ್ದು, ಪರಿಶೀಲಿಸುವಂತೆ ಹೇಳಿದ್ದಾರೆ. ನಂತರ ಗಿರೀಶ್, ಪಪ್ಪು, ಬೇಕರಿಯ ಬಾಗಿಲು ತೆರೆದು ಲೈಟ್‌ನ ಸ್ವಿಚ್ ಹಾಕುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT