ರಸ್ತೆ ಪಕ್ಕದಲ್ಲಿದ್ದ ಕಟ್ಟಡದಲ್ಲಿನ ಬಿರಿಯಾನಿ ಹೋಟೆಲ್‌ನಲ್ಲಿ ಕಬಾಬ್ ತಯಾರಿಸುವ ವೇಳೆ ಸಿಲಿಂಡರ್ ಖಾಲಿ ಆಗಿದೆ. ಆಗ ಮಾಲೀಕ ಸಿಲಿಂಡರ್ ಬದಲಿಸುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಗಾಬರಿಗೊಂಡು ಸಿಲಿಂಡರ್ ಅನ್ನು ರಸ್ತೆಗೆ ಬಿಸಾಡಿದ್ದಾರೆ. ಅದು ಅಲ್ಲಿಯೇ ನಿಂತಿದ್ದ ಆಟೊ ಒಳಗೆ ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿತು. ಅಗ್ನಿಯ ಜ್ವಾಲೆ ಹೆಚ್ಚಾಗುತ್ತಲೇ ಅಕ್ಕಪಕ್ಕದ ನಾಲ್ಕು ದ್ವಿಚಕ್ರ ವಾಹನಗಳಿಗೂ ಬೆಂಕಿ ತಗುಲಿದೆ. ಐದು ವಾಹನಗಳು ಸಂಪೂರ್ಣ ಸುಟ್ಟು ಹೋಗಿವೆ.