ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನ, ವಜ್ರಾಭರಣ ಕಳವು: ಅಡುಗೆ ಕೆಲಸಗಾರ ಬಂಧನ

Published 23 ಏಪ್ರಿಲ್ 2024, 15:29 IST
Last Updated 23 ಏಪ್ರಿಲ್ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ದೊಡ್ಡನೆಕ್ಕುಂದಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿ ಸುರೇಂದ್ರ ಕಾಮತ್ (29) ಎಂಬುವವರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ಸುರೇಂದ್ರ, ದೂರುದಾರ ಅಮಿತ್ ಜೈನ್ ಅವರ ಫ್ಲ್ಯಾಟ್‌ನಲ್ಲಿ ಹಲವು ತಿಂಗಳಿನಿಂದ ಅಡುಗೆ ಕೆಲಸ ಮಾಡುತ್ತಿದ್ದ. ಮಾಲೀಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಈತನನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿದೆ. ₹ 50 ಲಕ್ಷ ಮೌಲ್ಯದ 502 ಗ್ರಾಂ ತೂಕದ ಚಿನ್ನಾಭರಣ, 99.5 ಗ್ರಾಂ ತೂಕದ ವಜ್ರದ ಆಭರಣ, 199 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ₹ 12 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಅಮಿತ್ ಜೈನ್ ಹಾಗೂ ಕುಟುಂಬದವರು ಏಪ್ರಿಲ್ 12ರಂದು ಮುಂಬೈಗೆ ತೆರಳಿದ್ದರು. ಅವಾಗಲೇ ಆರೋಪಿ ಚಿನ್ನಾಭರಣ, ವಜ್ರದ ಆಭರಣ ಹಾಗೂ ನಗದು ಕದ್ದುಕೊಂಡು ಪರಾರಿಯಾಗಿದ್ದ. ಏಪ್ರಿಲ್ 15ರಂದು ದೂರುದಾರರು ಮನೆಗೆ ವಾಪಸು ಬಂದಿದ್ದಾಗ ಕಳ್ಳತನ ಸಂಗತಿ ಗೊತ್ತಾಗಿತ್ತು. ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

ರೈಲು ನಿಲ್ದಾಣದಲ್ಲಿ ವಶಕ್ಕೆ: ‘ಆರೋಪಿ ಸುರೇಂದ್ರ ಪತ್ತೆಗಾಗಿ ರಚಿಸಿದ್ದ ವಿಶೇಷ ತಂಡ ಬಿಹಾರಕ್ಕೆ ಹೋಗಿತ್ತು. ಆದರೆ, ಆತ ಮನೆಯಲ್ಲಿ ಇರಲಿಲ್ಲ. ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ಹೋದಾಗ, ಆತ ರೈಲು ನಿಲ್ದಾಣದಲ್ಲಿರುವುದು ಗೊತ್ತಾಗಿತ್ತು. ವಿಜಯವಾಡದ ರೈಲು ನಿಲ್ದಾಣದಲ್ಲಿ ಈತನನ್ನು ವಶಕ್ಕೆ ಪಡೆಯಲಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT