ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಪೌಂಡ್‌ ಮೇಲೆ ‘ಫ್ರೀ ಕಾಶ್ಮೀರ’

Last Updated 2 ಮಾರ್ಚ್ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ಡಿಕನ್ಸನ್‌ ರಸ್ತೆಯಲ್ಲಿರುವ ‘ಮೇಜರ್ ಸಂದೀಪ್ ಉನ್ನಿಕೃಷ್ಣನ್ ಎನ್‌ಕ್ಲೇವ್’ ವಸತಿ ಸಮುಚ್ಚಯಗಳ ಕಾಂಪೌಂಡ್ ಮೇಲೆ ಕಿಡಿಗೇಡಿಗಳು ‘ಫ್ರೀ ಕಾಶ್ಮೀರ’ ಎಂಬ ಬರಹ ಬರೆದಿದ್ದು, ಅವರ ಪತ್ತೆಗಾಗಿ ಪೊಲೀಸರು ಹುಡು ಕಾಟ ನಡೆಸುತ್ತಿದ್ದಾರೆ.

ಸೇನೆ ಅಧಿಕಾರಿಗಳು ಹಾಗೂ ಅವರ ಕುಟುಂಬದವರುವಸತಿ ಸಮುಚ್ಚಯ ಗಳಲ್ಲಿ ವಾಸವಿದ್ದಾರೆ. ಅದರ ಕಾಂಪೌಂ ಡ್‌ಗೆ ಸೋಮವಾರ ರಾತ್ರಿ ಕಿಡಿಗೇಡಿಗಳು ಬರಹ ಬರೆದು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹಲಸೂರು ಪೊಲೀಸರು, ಬರಹದ ಮೇಲೆ ಬಣ್ಣ ಬಳಿದು ಅಳಿಸಿ ಹಾಕಿದರು.

‘ಶಾಂತಿ ಕದಡುವ ಉದ್ದೇಶದಿಂದ ಕಿಡಿಗೇಡಿಗಳು ಕೃತ್ಯ ಎಸಗಿರುವ ಸಾಧ್ಯತೆ ಇದೆ.ಸಾರ್ವಜನಿಕ ಸ್ಥಳವನ್ನು ವಿರೂ ಪಗೊಳಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಡಿಸಿಪಿ ಎಸ್.ಡಿ.ಶರಣಪ್ಪ ಹೇಳಿದರು.

ಚರ್ಚ್‌ಸ್ಟ್ರೀಟ್‌ ಪ್ರಕರಣದಲ್ಲಿ ಪತ್ತೆಯಾಗದ ಆರೋಪಿಗಳು: ಚರ್ಚ್‌ ಸ್ಟ್ರೀಟ್‌ನಲ್ಲಿರುವ ಮಳಿಗೆಗಳ ಬಾಗಿಲು ಮೇಲೆಯೂ ಇತ್ತೀಚೆಗೆ, ‘ಫ್ರೀ ಕಾಶ್ಮೀರ’ ಬರಹ ಬರೆಯಲಾಗಿತ್ತು. ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರೂ ಪ್ರತಿಭಟನೆಯನ್ನೂ ನಡೆಸಿದ್ದರು. ಬರಹ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಆರೋಪಿಗಳನ್ನೂ ಪತ್ತೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT