ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ; ದ್ವಿಚಕ್ರ ವಾಹನ ಸವಾರನಿಗೆ ₹ 42,500 ದಂಡ!

Last Updated 30 ಅಕ್ಟೋಬರ್ 2020, 8:18 IST
ಅಕ್ಷರ ಗಾತ್ರ

ಬೆಂಗಳೂರು: ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ನಗರದ ಸಂಚಾರ ಪೊಲೀಸರು, ₹42,500 ದಂಡ ವಿಧಿಸಿದ್ದಾರೆ.

ಸವಾರ ಅರುಣ್‌ಕುಮಾರ್‌ ಎಂಬಾತ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ. ಆತನನ್ನು ತಡೆದಿದ್ದ ಮಡಿವಾಳ ಸಂಚಾದ ಠಾಣೆ ಪಿಎಸ್ಐ ಶಿವರಾಜಕುಮಾರ್ ಅಂಗಡಿ ಅವರು ಹಳೇ ಪ್ರಕರಣಗಳ ತಪಾಸಣೆ ನಡೆಸಿದ್ದರು.

ಸವಾರ ಅರುಣ್‌ಕುಮಾರ್ ಇದುವರೆಗೂ 77 ಬಾರಿ ನಿಯಮ ಉಲ್ಲಂಘಿಸಿದ್ದು, ತಪಾಸಣೆ ವೇಳೆ ಗೊತ್ತಾಗಿತ್ತು. ಇನ್‌ಸ್ಪೆಕ್ಟರ್ ನವೀನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಸವಾರ ಅರುಣ್‌ಕುಮಾರ್ ಅವರಿಗೆ ಸ್ಥಳದಲ್ಲೇ ದಂಡದ ರಶೀದಿ ನೀಡಿದ್ದಾರೆ. ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.

ದಂಡವೇ ಜಾಸ್ತಿ: ಸವಾರ ಅರುಣ್‌ಕುಮಾರ್, ಸೆಕೆಂಡ್ ಹ್ಯಾಂಡ್‌ನಲ್ಲಿ ದ್ವಿಚಕ್ರ ವಾಹನ ಖರೀದಿಸಿದ್ದ. ಅದರ ಮೌಲ್ಯವೇ ಸದ್ಯ ₹ 20 ಸಾವಿರದಿಂದ ₹ 30 ಸಾವಿರ ಇದೆ. ಅದಕ್ಕಿಂತಲೂ ದಂಡವೇ ಹೆಚ್ಚಿದೆ.
ದಂಡದ ರಶೀದಿ ತೆಗೆದುಕೊಂಡು ಹೋದ. ಸವಾರ, ವಾಪಸು ಬಂದಿಲ್ಲ. ಆತ ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಬೇಕು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT