ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ ಮೂರ್ತಿ ವಿಸರ್ಜನೆ: ಸಂಚಾರ ನಿಷೇಧ

Published : 10 ಸೆಪ್ಟೆಂಬರ್ 2024, 22:04 IST
Last Updated : 10 ಸೆಪ್ಟೆಂಬರ್ 2024, 22:04 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಕೆ.ಜಿ.ಹಳ್ಳಿ ಹಾಗೂ ಪುಲಿಕೇಶಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೆ.11 ರಂದು ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮತ್ತು ಮೆರವಣಿಗೆ ನಡೆಯುವ ಕಾರಣ ಟ್ಯಾನರಿ ರಸ್ತೆ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಸುಗಮ ಸಂಚಾರಕ್ಕಾಗಿ ಮಧ್ಯಾಹ್ನ 12.30 ರಿಂದ ರಾತ್ರಿ 1 ರ ವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿರ್ಬಂಧ
* ನಾಗವಾರ ಮುಖ್ಯರಸ್ತೆ, ಟ್ಯಾನರಿ ರಸ್ತೆ, ಡೇವಿಸ್‌ ರೋಡ್‌ ಮುಖ್ಯರಸ್ತೆ
* ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ ಮೂಲಕ ಟ್ಯಾನರಿ ರಸ್ತೆ ಕಡೆಗೆ
* ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್‌ ಕಡೆಗೆ ಹೋಗುವ ಮಾರ್ಗ
* ರೋಜರ್ಸ್ ರಸ್ತೆ, ಆರ್ಮ್‌ಸ್ಟ್ರಾಂಗ್ ರಸ್ತೆ ಹಾಗೂ ಹಾಲ್‌ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಮಾರ್ಗ
* ಮಾಸ್ಕ್‌ ಜಂಕ್ಷನ್‌ನಿಂದ ಕ್ಲಾರೆನ್ಸ್‌ ಬ್ರಿಡ್ಜ್‌ ಮೂಲಕ ಪಾಟರಿ ರಸ್ತೆ ಕಡೆಗೆ
* ಲಾಜರ್‌ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ನಿಂದ ಸಿಂಧಿ ಕಾಲೊನಿ ಜಂಕ್ಷನ್‌, ಬುದ್ಧ ವಿಹಾರ ರಸ್ತೆ
* ಸಿಂಧಿ ಕಾಲೊನಿ ಜಂಕ್ಷನ್‌ನಿಂದ ವಾರ್‌ ಮೆಮೋರಿಯಲ್‌ ಜಂಕ್ಷನ್‌ ಕಡೆಗೆ ದ್ವಿಮುಖ ಸಂಚಾರ ಬದಲಾವಣೆ
* ಸಿಂಧಿ ಕಾಲೊನಿ ಜಂಕ್ಷನ್‌ ಕಡೆಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT