ಮಂಗಳವಾರ, ಜನವರಿ 21, 2020
28 °C

ರಿಫಿಲ್ಲಿಂಗ್ ವೇಳೆ ಸ್ಫೋಟ; ಇಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ದೊಡ್ಡತೋಗೂರಿನಲ್ಲಿ ಅಕ್ರಮವಾಗಿ ಸಿಲಿಂಡರ್‌ ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

‘ಮಂಗಳವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ರಾಜಸ್ಥಾನದ ದಿನೇಶ್ (31) ಹಾಗೂ ಅನಿಲ್ (30) ಎಂಬುವರು ಗಾಯಗೊಂಡಿದ್ದಾರೆ. ಅಕ್ರಮ ರಿಫಿಲ್ಲಿಂಗ್ ಮಾಡಿಸುತ್ತಿದ್ದ ಆರೋಪದಡಿ ದೇವಾನಂದ್ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತಿಳಿಸಿದರು.

‘ಮನೆಯಲ್ಲಿ ಸಿಲಿಂಡರ್ ಸಂಗ್ರಹಿಸಿಟ್ಟುಕೊಂಡಿದ್ದ ಆರೋಪಿ ಅಕ್ರಮವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದ. ಅದರ ಕೆಲಸಕ್ಕಾಗಿ ದಿನೇಶ್ ಹಾಗೂ ಅನಿಲ್‌ ಅವರನ್ನು ನೇಮಿಸಿಕೊಂಡಿದ್ದ. ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆಯಲ್ಲೇ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಮನೆಯಲ್ಲೇ ಸಿಲುಕಿ ಕಿರುಚಾಡುತ್ತಿದ್ದ ದಿನೇಶ್ ಹಾಗೂ ಅನಿಲ್ ಅವರನ್ನು ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಹೇಳಿದರು.

‘ಗಾಯಾಳುಗಳ ಕಾಲು ಹಾಗೂ ಕೈಗೆ ಸುಟ್ಟ ಗಾಯಗಳಾಗಿವೆ. ಅನಿಲ್ ಅವರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು. 

ಪ್ರತಿಕ್ರಿಯಿಸಿ (+)