ಗುರುವಾರ , ಜನವರಿ 23, 2020
29 °C

ಗೌರಿ ಲಂಕೇಶ್ ಹತ್ಯೆ ಆರೋಪಿ 15 ದಿನ ಎಸ್ಐಟಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಂಕೇಶ್ ಹತ್ಯೆ ಪ್ರಕರಣದ ಆರೋಪಿ ರಿಷಿಕೇಶ್ ದೇವ್ಡಕರ್ ನನ್ನು ವಿಶೇಷ ತನಿಖಾ ದಳದ(ಎಸ್ಐಟಿ) ಅಧಿಕಾರಿಗಳು ನಗರದ ಸಿಸಿಎಚ್-1 ರ ನ್ಯಾಯಾಧೀಶರ ಎದುರು ಸೋಮವಾರ ಹಾಜರುಪಡಿಸಿದರು.

ಎಸ್ಐಟಿ ಅಧಿಕಾರಿಗಳ ಮನವಿಯಂತೆ ನ್ಯಾಯಾಧೀಶರು ಆರೋಪಿಯನ್ನು  ಇದೇ 27ರವರೆಗೆ, ಅಂದರೆ 15 ದಿನ ಎಸ್ಐಟಿ ವಶಕ್ಕೆ  ನೀಡಿದರು.

ಗೌರಿ ಹತ್ಯೆ ಪ್ರಕರಣದಲ್ಲಿ ರಿಷಿಕೇಶ್ 18ನೇ ಆರೋಪಿ. ತಲೆಮರೆಸಿಕೊಂಡು ಓಡಾಡುತ್ತಿದ್ದ ಈತನನ್ನು ಇತ್ತೀಚೆಗೆ ಎಸ್ಐಟಿ ಅಧಿಕಾರಿಗಳು ಜಾರ್ಖಂಡ್ ರಾಜ್ಯದ ಧನಾಬಾದ್ ಜಿಲ್ಲೆಯಲ್ಲಿ ಬಂಧಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು