ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಗಂಗಾಧರೇಶ್ವರ ದೇವಾಲಯದಲ್ಲಿ ಘಟಿಸಿದ ಸಂಕ್ರಾಂತಿ ವಿಸ್ಮಯ

Last Updated 15 ಜನವರಿ 2020, 14:48 IST
ಅಕ್ಷರ ಗಾತ್ರ

ಬೆಂಗಳೂರು: ಮಕರ ಸಂಕ್ರಾಂತಿಯ ದಿನವಾದ ಗುರುವಾರ ಸೂರ್ಯ ತನ್ನ ಪಥ ಬದಲಿಸುವ ಸಂದರ್ಭದಲ್ಲಿಸೂರ್ಯನ ರಶ್ಮಿ ಗವಿಪುರದಲ್ಲಿರುವಗವಿಗಂಗಾಧರೇಶ್ವರದೇಗುಲದ ಶಿವಲಿಂಗವನ್ನು1.17 ನಿಮಿಷ ಸ್ಪರ್ಷಿಸಿತು.

ಈ ಕ್ಷಣಕ್ಕೆ ಸಾವಿರಾರು ಭಕ್ತಾಧಿಗಳು ಸಾಕ್ಷಿಯಾದರು.ದೇಗುಲದ ಬಲಭಾಗದ ಕಿಂಡಿಯಿಂದಸಂಜೆ 5.34ರ ವೇಳೆಗೆ ಸೂರ್ಯರಶ್ಮಿ ಪ್ರವೇಶಿಸಿತು. ಮೊದಲುಗವಿಗಂಗಾಧರೇಶ್ವರದೇವರ ಪಾದ ಸ್ಪರ್ಷಿಸಿತು. ಬಳಿಕ ನಂದಿ ವಿಗ್ರಹದ ಮೂಲಕ ಹಾದುಹೋದ ಸೂರ್ಯಕಿರಣಗಳು, ಇಡೀ ಶಿವಲಿಂಗವನ್ನು ಆವರಿಸಿತು. ಈ ಅವಧಿಯಲ್ಲಿ ದೇವರಿಗೆ ನಿರಂತರವಾಗಿ ಅಭಿಷೇಕ ನಡೆಸಲಾಯಿತು. ಶಿವಲಿಂಗದ ಮೇಲೆ ಕೇವಲ 03 ಸೆಕೆಂಡ್‌ಗಳು ಮಾತ್ರ ಸೂರ್ಯನ ಕಿರಣಗಳು ಪ್ರಕಾಶಿಸಿದವು.

ಸೂರ್ಯರಶ್ಮಿ ದೇವರನ್ನು ಸ್ಪರ್ಶಿಸಿ ಮರೆಯಾದ ನಂತರ ಮತ್ತೊಮ್ಮೆ ದೇವರಿಗೆ ಅಭಿಷೇಕ ಮಾಡಿ, ಪೂಜೆ ನಡೆಸಲಾಯಿತು.ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಅವಧಿಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ದಂಪತಿ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯಟಿ.ಎ.ಶರವಣ, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಹಲವು ಗಣ್ಯರು ಸೂರ್ಯ ರಶ್ಮಿಯು ದೇವರನ್ನು ಸ್ಪರ್ಷಿಸುವ ಪ್ರಕ್ರಿಯೆಯನ್ನು ಕಣ್ತುಂಬಿಕೊಂಡರು.

ಭಕ್ತರಿಗೆ ದೇವಾಲಯದ ಹೊರಗಡೆ ವಿಶೇಷ ಎಲ್‌ಇಡಿ ಪರದೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.ಸೂರ್ಯರಶ್ಮಿ ಶಿವಲಿಂಗ ಸ್ಪರ್ಶಿಸಿ ಮರೆಯಾದ ಬಳಿಕ ಗಂಗಾಜಲವನ್ನು ಪ್ರೋಕ್ಷಣೆ ಮಾಡಿ, ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕಡಾ.ಸೋಮಸುಂದರ ದೀಕ್ಷಿತ್‌ ಮಾತನಾಡಿ, ‘ಕಳೆದ ವರ್ಷ ಸೂರ್ಯನ ರಶ್ಮಿಶಿವಲಿಂಗವನ್ನು 1.03 ನಿಮಿಷ ಸ್ಪರ್ಷಿಸಿತ್ತು. ಅದರಲ್ಲಿಲಿಂಗದ ಮೇಲೆ 07 ಸೆಕೆಂಡ್‌ಗಳು ಕಿರಣಗಳು ಬಿದ್ದಿದ್ದವು. ಇದರಿಂದ ಬಹಳಷ್ಟು ಅನಾಹುತಗಳು ಆದವು. ಈ ವರ್ಷ ಕೇವಲ ಮೂರು ಸೆಂಕೆಂಡ್‌ಗಳು ಮಾತ್ರ ಈಶ್ವರನ್ನು ಪೂಜೆ ಮಾಡಿದ ಸೂರ್ಯ, ಉತ್ತರಾಯಣ ಪ್ರವೇಶ ಮಾಡಿದ್ದಾನೆ. ಅವನ ಅನುಗ್ರಹದಿಂದ ಈ ಬಾರಿ ಎಲ್ಲರಿಗೂ ಶುಭವಾಗಲಿದೆ. ಅನಾಹುತಕ್ಕೆ ಅವಕಾಶವಿಲ್ಲ’ ಎಂದು ತಿಳಿಸಿದರು.

10 ಸಾವಿರಕ್ಕೂ ಹೆಚ್ಚು ಭಕ್ತರು:ಗವಿಗಂಗಾಧರೇಶ್ವರದೇವಾಲಯದಲ್ಲಿ ನಡೆಯುವ ಸೂರ್ಯರಶ್ಮಿಯ ವಿಸ್ಮಯವನ್ನು ನೋಡಲು ನಗರದ ನಾನಾ ಭಾಗಗಳಿಂದ 10 ಸಾವಿರಕ್ಕೂ ಹೆಚ್ಚು ಭಕ್ತರು ಬಂದಿದ್ದರು. ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವಾಗ ಭಕ್ತರಿಗೆ ಒಳಗೆ ಪ್ರವೇಶ ಇರಲಿಲ್ಲವಾದ್ದರಿಂದ ಹೊರಗಡೆಯೇ ಶಿವನಾಮ ಪಠಿಸಿದರು. ಬಳಿಕ ಸರತಿಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ದೇವರ ದರ್ಶನ ಪಡೆದುಕೊಂಡರು.

‘ನಮ್ಮ ಪೂರ್ವಜರು ಎಷ್ಟು ದೊಡ್ಡ ಎಂಜಿನಿಯರ್‌ಗಳು ಎನ್ನುವುದಕ್ಕೆ ಈ ವಿಸ್ಮಯವೇ ಸಾಕ್ಷಿ.ಇದನ್ನು ವೀಕ್ಷಣೆ ಮಾಡಿರುವುದು ಆನಂದವನ್ನುಂಟು ಮಾಡಿದೆ. ನಾಸ್ತಿಕರು ಎನಿಸಿಕೊಳ್ಳುವವರು ಇದನ್ನು ನೋಡಿ, ತಿಳಿದುಕೊಳ್ಳಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT