ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಬರುವ ರಾಜಕೀಯ ಮುಖಂಡರಿಗೆ ಉಡುಗೊರೆ ನೀಡಲೆಂದು 3 ಕೆ.ಜಿ 653 ಗ್ರಾಂ ಚಿನ್ನಾಭರಣ ಪಡೆದು, ಅದನ್ನು ವಾಪಸು ಕೇಳಿದ್ದಕ್ಕೆ ₹ 85 ಲಕ್ಷ ಸುಲಿಗೆ ಮಾಡಿದ್ದ ಆರೋಪಿ ಅಭಯ್ ಜೈನ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸಿ.ಟಿ. ಸ್ಟ್ರೀಟ್ನಲ್ಲಿರುವ ಅರಿಹಂತ್ ಆಭರಣ ಮಳಿಗೆ ಮಾಲೀಕ ವಿಶಾಲ್ ಜೈನ್ ಅವರು ವಂಚನೆ ಬಗ್ಗೆ ಸಿಟಿ ಮಾರ್ಕೆಟ್ ಠಾಣೆಗೆ ದೂರು ನೀಡಿದ್ದರು. ಅವರ ದೊಡ್ಡಪ್ಪನ ಮಗನ ಪತ್ನಿಯ ಸಂಬಂಧಿ ಅಭಯ್ ಜೈನ್, ಕಿರಣ್ ಪಗಾರಿಯಾ ಲೋಡಾ, ಸಂಕೇತ್, ನವೀನ್ ದನಿ, ಚರಣ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಅಭಯ್ ಜೈನ್ನನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಅಭಯ್, ಕಿರಣ್ ಹಾಗೂ ನಿತಿನ್, ಫೆ. 16ರಂದು ವಿಶ್ವಾಸ್ ಅವರ ಆಭರಣ ಮಳಿಗೆಗೆ ಹೋಗಿದ್ದರು. ‘ನಮಗೆಲ್ಲ ದೊಡ್ಡ ರಾಜಕಾರಣಿಗಳು ಪರಿಚಯವಿದ್ದಾರೆ. ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದು, ಪ್ರಚಾರಕ್ಕೆಂದು ಹೊರ ರಾಜ್ಯಗಳಿಂದ ಹಾಗೂ ಕೇಂದ್ರದಿಂದ ಮುಖಂಡರು ಕರ್ನಾಟಕಕ್ಕೆ ಬರಲಿದ್ದಾರೆ. ಅವರಿಗೆ ಉಡುಗೊರೆಯಾಗಿ ನೀಡಲು ಚಿನ್ನಾಭರಣಗಳು ಬೇಕಿವೆ. ನೀವು ಕೊಟ್ಟರೆ, ಹಣ ಕೊಡಿಸುತ್ತೇವೆ’ ಎಂದು ಅಭಯ್ ಹೇಳಿದ್ದ.’

‘ಆರೋಪಿಗಳ ಮಾತು ನಂಬಿದ್ದ ವಿಶ್ವಾಸ್, ಹಂತ ಹಂತವಾಗಿ ₹ 3 ಕೆ.ಜಿ 653 ಗ್ರಾಂ ಚಿನ್ನಾಭರಣ ನೀಡಿದ್ದರು. ಇದಾದ ನಂತರ, ಆರೋಪಿಗಳು ಹಣ ನೀಡಿರಲಿಲ್ಲ. ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದರು’ ಎಂದು ಪೊಲೀಸರು ಹೇಳಿದರು.

ಪುನಃ ವಂಚನೆ: ‘ಆರೋಪಿಗಳನ್ನು ಪತ್ತೆ ಮಾಡಿದ್ದ ವಿಶ್ವಾಸ್, ‘ಹಣ ಕೊಡಿ. ಇಲ್ಲವಾದರೆ, ಆಭರಣ ವಾಪಸು ನೀಡಿ’ ಎಂದಿದ್ದರು. ರಾಜಕೀಯ ಮುಖಂಡರಿಗೆ ಚಿನ್ನಾಭರಣ ನೀಡಿರುವುದಾಗಿ ಹೇಳಿದ್ದ ಆರೋಪಿಗಳು, ‘ನಮ್ಮ ಪರಿಚಯಸ್ಥರೊಬ್ಬರ ಬಳಿ 8 ಕೆ.ಜಿ ಚಿನ್ನದ ಗಟ್ಟಿ ಇದೆ. ಅದನ್ನು ನಿಮಗೆ ಕೊಡಿಸುತ್ತೇವೆ. ನಾವು ನೀಡಬೇಕಿರುವ ಹಣ ಕಡಿತ ಮಾಡಿಕೊಂಡು, ಉಳಿದ ₹ 50 ಲಕ್ಷವನ್ನು ಆತನಿಗೆ ಕೊಟ್ಟು ಕಳುಹಿಸಿ’ ಎಂಬುದಾಗಿ ಆರೋಪಿಗಳು ಹೇಳಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಆರೋಪಿಗಳ ಮಾತು ನಂಬಿದ್ದ ವಿಶ್ವಾಸ್, ಚಿನ್ನದ ಗಟ್ಟಿ ಇದೆ ಎನ್ನಲಾದ ಬ್ಯಾಗ್ ಪಡೆದು ₹ 50 ಲಕ್ಷ ನೀಡಿದ್ದರು. ಮಳಿಗೆಗೆ ಹೋಗಿ ಪರಿಶೀಲಿಸಿದಾಗ, ಬ್ಯಾಗ್ನಲ್ಲಿ ಕಬ್ಬಿಣದ ತುಂಡುಗಳಿರುವುದು ಪತ್ತೆಯಾಗಿತ್ತು. ಪುನಃ ವಂಚನೆಯಾಗಿದ್ದಕ್ಕೆ ಆಕ್ರೋಶಗೊಂಡಿದ್ದ ವಿಶ್ವಾಸ್, ಚಿನ್ನಾಭರಣ ಹಾಗೂ ಹಣ ವಾಪಸು ನೀಡುವಂತೆ ಪಟ್ಟು ಹಿಡಿದಿದ್ದರು. ಜೊತೆಗೆ, ವಿ.ವಿ.ಪುರ ಠಾಣೆಗೂ ದೂರು ನೀಡಿದ್ದರು. ಅಭಯ್ ಜೈನ್ ಹಾಗೂ ಇತರರನ್ನು ಠಾಣೆಗೆ ಕರೆಸಿದ್ದ ಪೊಲೀಸರು, ವಿಚಾರಣೆ ಮಾಡಿದ್ದರು. ಹಣ ವಾಪಸು ಕೊಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು.’

‘ಆದರೆ, ಆರೋಪಿಗಳು ಹಣ ಕೊಟ್ಟಿರಲಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆಯೊಡ್ಡಿದ್ದರು. ‘ದೊಡ್ಡ ರಾಜಕಾರಣಿಗಳು ನಮ್ಮ ಜೊತೆಗಿದ್ದಾರೆ. ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಎಂದಿದ್ದ ಆರೋಪಿಗಳು ₹ 30 ಲಕ್ಷ ಸುಲಿಗೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.