ಶನಿವಾರ, ಫೆಬ್ರವರಿ 29, 2020
19 °C
ಲಘು ಉದ್ಯೋಗ ಭಾರತಿಯಿಂದ 'ಟೆಕ್ ಭಾರತ್' ಸಮ್ಮೇಳನ

20 ಸಾವಿರ ನವೋದ್ಯಮ ಸ್ಥಾಪನೆ ಗುರಿ: ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ರಾಜ್ಯದಲ್ಲಿ 2022ರ ವೇಳೆಗೆ 20 ಸಾವಿರ ನವೋದ್ಯಮ ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿದೆ' ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ ಹೇಳಿದರು‌.

ನಗರದಲ್ಲಿ ಶುಕ್ರವಾರ ಲಘು ಉದ್ಯೋಗ ಭಾರತಿ ಆಯೋಜಿಸಿರುವ 'ಟೆಕ್ ಭಾರತ್' ಸಮ್ಮೇಳನದಲ್ಲಿ ಮಾತನಾಡಿದ ಅವರು, 'ಈ ವರ್ಷ ರಾಜ್ಯದಲ್ಲಿ 9000 ನವೋದ್ಯಮಗಳು ಸ್ಥಾಪನೆಯಾಗಲಿವೆ. ಇದಕ್ಕೆ ಬೇಕಾದ ಎಲ್ಲ ನೆರವನ್ನು ರಾಜ್ಯಸರ್ಕಾರ ನೀಡುತ್ತಿದೆ'. 'ದೇಶದಲ್ಲೇ ಮೊದಲ ಬಾರಿಗೆ ನವೋದ್ಯಮ ನೀತಿ ರೂಪಿಸಿದ್ದು ಕರ್ನಾಟಕ ಸರ್ಕಾರ. ರಾಜ್ಯದಲ್ಲಿ ಒಟ್ಟು 57 ಇನ್ ಕ್ಯುಬೇಷನ್ ಕೇಂದ್ರಗಳಿಗೆ ಒಟ್ಟು ₹70 ಕೋಟಿ ನೆರವು ಒದಗಿಸಲಾಗಿದೆ' ಎಂದರು.

'ನವೋದ್ಯಮ ಸ್ಥಾಪಿಸುವ ವೇಳೆ ಎದುರಾಗುವ ಕಾನೂನು ಅಡೆ-ತಡೆಗಳನ್ನು ಬಗೆಹರಿಸಲು ಕರ್ನಾಟಕ ಅನ್ವೇಷಣಾ ಪ್ರಾಧಿಕಾರ ರಚಿಸಲಾಗಿದೆ. ಅಲ್ಲದೆ, ಎಲ್ಲ ರೀತಿಯ ವಿನಾಯ್ತಿಗಳನ್ನು ನವೋದ್ಯಮ ಸ್ಥಾಪನೆಗೆ ನೀಡಲಾಗುತ್ತಿದೆ. ಮುಖ್ಯವಾಗಿ ಆಳ ತಂತ್ರಜ್ಞಾನ ಆಧಾರಿತ ನವೋದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ' ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ, 'ತಂತ್ರಜ್ಞಾನ ಪ್ರಗತಿಗೆ ಪೂರಕವಾದ ಹಲವು ನೀತಿಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ವಿದೇಶಿ ಕಂಪನಿಗಳು ಹೆಚ್ಚು ಬಂಡವಾಳ ಹೂಡುತ್ತಿವೆ. ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ದೇಶ ಮುಂಚೂಣಿಯಲ್ಲಿದೆ' ಎಂದರು.

ದೇಶದ ಸರ್ಕಾರಿ ಇ ಮಾರ್ಕೆಟ್ (ಜೆಮ್) ಪೋರ್ಟಲ್ ನ ಸಿಇಒ, ತಳೀನ್ ಕುಮಾರ್, 'ದೇಶದಲ್ಲಿಯೇ ಈಗ ನವೋದ್ಯಮ ಸ್ಥಾಪನೆಗೆ ಅತ್ಯಂತ ಸೂಕ್ತವಾದ ಸ್ಥಳ ಬೆಂಗಳೂರು‌. ತಾಂತ್ರಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಇದು. ದೇಶದ 32 ಪ್ರಸಿದ್ಧ ಕಂಪನಿಗಳ ಪೈಕಿ 14 ಕಂಪನಿಗಳು ಬೆಂಗಳೂರು ಮೂಲದವು ' ಎಂದು ತಿಳಿಸಿದರು.

ರಾಜ್ಯದಲ್ಲಿ ನವೋದ್ಯಮ ಸ್ನೇಹಿ ವಾತಾವರಣ ಇದೆ. ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಇವುಗಳ ಕೊಡುಗೆ ದೊಡ್ಡದಿದೆ. ದೇಶದಲ್ಲಿ ಪ್ರತಿ ತಿಂಗಳು ಒಂದು ಸಾವಿರ ನವೋದ್ಯಮಗಳು ಸ್ಥಾಪನೆಯಾಗುತ್ತಿವೆ. ಸರ್ಕಾರದ ನೇರ ಭಾಗವಹಿಸುವಿಕೆ ಈ ಪ್ರಕ್ರಿಯೆಯಲ್ಲಿದೆ ಎಂದರು.

ಸಮಾವೇಶದಲ್ಲಿ 600 ಕ್ಕೂ ಹೆಚ್ಚು ನವೋದ್ಯಮಗಳ ಮಳಿಗೆಯನ್ನು ಹಾಕಲಾಗಿತ್ತು‌. ಉತ್ತಮ ತಂತ್ರಜ್ಞಾನ ಮತ್ತು ಯೋಜನೆ ಹೊಂದಿರುವ ಇಬ್ಬರಿಗೆ ಅಥವಾ ನವೋದ್ಯಮಕ್ಕೆ ತಲಾ ₹1 ಲಕ್ಷ ಬಹುಮಾನ ನೀಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು