ಕಳಚಿ ಬಿದ್ದ ಗೋದಾಮಿನ ರ‍್ಯಾಕ್‌ಗಳು: ಅವಶೇಷಗಳಡಿ ಸಿಲುಕಿರುವ ಇಬ್ಬರು ಕಾರ್ಮಿಕರು

7

ಕಳಚಿ ಬಿದ್ದ ಗೋದಾಮಿನ ರ‍್ಯಾಕ್‌ಗಳು: ಅವಶೇಷಗಳಡಿ ಸಿಲುಕಿರುವ ಇಬ್ಬರು ಕಾರ್ಮಿಕರು

Published:
Updated:

ಬೆಂಗಳೂರು: ವೈಟ್‌ಪೀಲ್ಡ್ ಬಳಿಯ ಸೀಗೆಹಳ್ಳಿ ರಸ್ತೆಯ‌ಲ್ಲಿರುವ ಲಾಜಿಸ್ಟಿಕ್ಸ್‌ ಕಂಪನಿಯೊಂದರ ಗೋದಾಮಿನಲ್ಲಿದ್ದ ರ‍್ಯಾಕ್‌ಗಳು ಗುರುವಾರ ಮಧ್ಯಾಹ್ನ ಕಳಚಿಬಿದ್ದಿದ್ದು, ಅವಶೇಷಗಳಡಿ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

ನಗರದ ವಿವಿಧ ಮಾಲ್‌ಗಳಿಗೆ ವಸ್ತುಗಳನ್ನು ಪೂರೈಸುವ ಕಂಪನಿ ಇದಾಗಿದ್ದು, ರ‍್ಯಾಕ್‌ಗಳನ್ನು ಸಾಲಾಗಿ ಜೋಡಿಸಿಟ್ಟು ಅವುಗಳಲ್ಲಿ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. 

ಮಧ್ಯಾಹ್ನ ರ‍್ಯಾಕ್‌ ಬಳಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೇ ವೇಳೆಯಲ್ಲಿ ರ‍್ಯಾಕ್‌ಗಳು ಕಳಚಿ ಬಿದ್ದಿದ್ದು, ಅವರ ಮೇಲೆ ಭಾರವಾದ ವಸ್ತುಗಳು ಸಹ ಬಿದ್ದಿದ್ದವು.

ಸ್ಥಳಕ್ಕೆ ಬಂದ ವೈಟ್‌ಪೀಲ್ಡ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಅವಶೇಷಗಳಡಿ ಸಿಲುಕಿದ್ದ ಐವರ ಪೈಕಿ ಮೂವರನ್ನು ಹೊರಗೆ ತೆಗೆದಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !