‘ಜಯನಗರದ ನಿವಾಸಿಯಾದ ಯುವತಿ, ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅರ್ಧಕ್ಕೆ ಮೊಟಕುಗೊಳಿಸಿದ್ದಳು. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಡ್ಯಾನಿಶ್ ಎಂಬಾತನ ಜತೆ ಸಲುಗೆಯಿಂದ ಇದ್ದಳು. ಡ್ಯಾನಿಶ್ ಸ್ನೇಹಿತ ಅರಾಫತ್ , ಯುವತಿಗೂ ಪರಿಚಿತ. ಈ ಮಧ್ಯೆ ಯುವತಿ ಹಾಗೂ ಡ್ಯಾನಿಶ್ ಅಂತರ ಕಾಯ್ದುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ಯುವತಿಗೆ ಕರೆ ಮಾಡಿ ಡ್ಯಾನಿಶ್ ಜೊತೆ ಇರುವ ಖಾಸಗಿ ವಿಡಿಯೊ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದ. ಮನೆಯಲ್ಲಿನ ಚಿನ್ನಾಭರಣ ತಂದು ಕೊಡದಿದ್ದರೆ ವಿಡಿಯೊ ಹರಿಯ ಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.