ಶನಿವಾರ, ಸೆಪ್ಟೆಂಬರ್ 25, 2021
23 °C

ಬೆಂಗಳೂರು: ಪರಿಚಯಸ್ಥರ ಮನೆಗಳಲ್ಲಿ ಚಿನ್ನಾಭರಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಚಯಸ್ಥರ ಮನೆಯಲ್ಲಿ ಚಿನ್ನಾಭರಣ, ನಗದು ಕದ್ದಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿಯ ಶೇಖರ್ ಬಂಧಿತ ಆರೋಪಿ.

ಈತ ತನಗೆ ಪರಿಚಯಸ್ಥರ ಮನೆಗೆ ಆಗಾಗ ಬರುತ್ತಿದ್ದ. ಜುಲೈ 15ರಂದು ಮನೆಯಲ್ಲಿದ್ದ ಚಿನ್ನಾಭರಣ, ನಗದು ಕಳವಾಗಿತ್ತು. ಮನೆಯವರು ಶೇಖರ್‌ ಮೇಲೆ ಶಂಕಿಸಿ, ಪೊಲೀಸರಿಗೆ ದೂರು ನೀಡಿದ್ದರು.

‘ಶೇಖರ್‌ನ ಬಗ್ಗೆ ವಿಚಾರಿಸಿದಾಗ ಆತ ತಲೆಮರೆಸಿಕೊಂಡಿರುವ ವಿಚಾರ ತಿಳಿಯಿತು. ಶೇಖರ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಕಳ್ಳತನ ಬಗ್ಗೆ ಬಾಯ್ಬಿಟ್ಟಿದ್ದ. ಆರೋಪಿಯಿಂದ ₹4.50 ಲಕ್ಷ ಬೆಲೆಬಾಳುವ 110 ಗ್ರಾಂ.ನಷ್ಟು ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಕಳ್ಳತನದಲ್ಲಿ ಮಹಿಳೆ ಭಾಗಿ: ಸಂಬಂಧಿಕರ ಮನೆಯಲ್ಲೇ ಚಿನ್ನಾಭರಣ, ನಗದು ಕದ್ದಿದ್ದ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಜ್ಞಾನಭಾರತಿಯ ಶ್ವೇತಾ ಹಾಗೂ ನಾಗರಾಜು ಬಂಧಿತ ಆರೋಪಿಗಳು.

‘ಕಳೆದ ಮಾರ್ಚ್‌ನಲ್ಲಿ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳವಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಮನೆಯವರಿಗೆ ಪರಿಚಯಸ್ಥರೇ ಆಗಿದ್ದರು. ಮನೆಗೆ ನುಗ್ಗಿ ಬೀರುವಿನಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು‘ ಎಂದು ಪೊಲೀಸರು ತಿಳಿಸಿದರು.

‘ಬಂಧಿತರಿಂದ ₹3.30 ಲಕ್ಷ ಬೆಲೆಬಾಳುವ 65 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.