ಸೋಮವಾರ, ಮಾರ್ಚ್ 30, 2020
19 °C

ಗೋಪಾಲಯ್ಯರಿಂದ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಕ್ಕೆ ಮೋಸವಾಗಿದೆ: ಎಚ್‌.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: 'ಕುಮಾರಸ್ವಾಮಿ ಸರ್ಕಾರ ನೀಡಿದ ಅನುದಾನ ಪಡೆದುಕೊಂಡು ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಸೋಲು ಖಂಡಿತ, ಅವರಲ್ಲಿರುವ ಹಣವನ್ನು ಎದುರಿಸುವ ಶಕ್ತಿ ಪಕ್ಷಕ್ಕೆ ಇದೆ' ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಅಭ್ಯರ್ಥಿ ಡಾ.ಗಿರೀಶ್ ಕೆ.ನಾಶಿ ಅವರ ಪರವಾಗಿ ಗುರುವಾರ ಮಹಾಲಕ್ಷ್ಮಿ ಬಡಾವಣೆಯ ಶನಿಮಹಾತ್ಮ ದೇವಸ್ಥಾನದಿಂದ ಪ್ರಚಾರ ಜಾಥಾ ಆರಂಭಿಸಿ ಮಾತನಾಡಿದ ಅವರು, ‘ನಾನೇ ಕ್ಷೇತ್ರದಲ್ಲಿ ಕಣಕ್ಕೆ ಇಳಿದು ಚುನಾವಣೆ ಎದುರಿಸುತ್ತಿದ್ದೇನೆ ಎಂಬ ಭಾವನೆಯೊಂದಿಗೆ ಇಲ್ಲಿ ಪ್ರಚಾರಕ್ಕೆ ಬಂದಿದ್ದೇನೆ, ಇದು ನಮ್ಮ ಸ್ವಾಭಿಮಾನದ ವಿಚಾರ‘ ಎಂದರು.

‘ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಡಲಾಗಿತ್ತು. ಶಾಸಕರ ಪತ್ನಿಯನ್ನು ಉಪಮೇಯರ್ ಮಾಡಲಾಯಿತು. ಕೊಟ್ಟ ದುಡ್ಡು  ಬಳಸಿಕೊಂಡಿದ್ದರೆ ಕ್ಷೇತ್ರ ಸಿಂಗಪುರವಾಗಬೇಕಿತ್ತು. ಆದರೆ ದುಡ್ಡು ಎಲ್ಲಿಗೆ ಹೋಯಿತು? ಪ್ರಜ್ಞಾವಂತ ಮತದಾರರು ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ದೇವೇಗೌಡರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು