ಶುಕ್ರವಾರ, ಜನವರಿ 22, 2021
21 °C

ಗೋಪಾಲಪುರ ಕೆರೆಗೆ ಬಾಗಿನ ಅರ್ಪಿಸಿದ ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದ ಕೆರೆಗೆ ಯಲಹಂಕ ಶಾಸಕ ಎಸ್.ಆರ್‌.ವಿಶ್ವನಾಥ್ ಮಂಗಳವಾರ ಬಾಗಿನ ಅರ್ಪಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ.ಟ್ರಸ್ಟ್, ಗೋಪಾಲಪುರ ಕೆರೆ ಬಳಕೆದಾರರ ಸಂಘ ಹಾಗೂ ಕೆರೆ ಸಂರಕ್ಷಣೆ ಪ್ರಾಧಿಕಾರಗಳ ಸಹಭಾಗಿತ್ವದಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ ₹60 ಲಕ್ಷ ವೆಚ್ಚದಲ್ಲಿ ಕೆರೆಯನ್ನು ಪುನಶ್ಚೇತನಗೊಳಿಸಲಾಗಿತ್ತು.

38 ಎಕರೆ ವಿಸ್ತೀರ್ಣದ ಕೆರೆಯ ಅಭಿವೃದ್ಧಿಗೆ ಕೆರೆಗೆ ಪ್ರಾಧಿಕಾರವು ₹20 ಲಕ್ಷ ಅನುದಾನ ಹಾಗೂ ದಾನಿಗಳು ₹29 ಲಕ್ಷ ನೀಡಿದ್ದರು.

‘ನೀರನ್ನು ಗಂಗೆ ಮಾತೆ ಎನ್ನುವ ಸಂಸ್ಕೃತಿ ನಮ್ಮದು. ನಾಡಪ್ರಭು ಕೆಂಪೇಗೌಡ ಅವರು 500 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಸಾಲುಮರಗಳನ್ನು ಬೆಳೆಸಿದ್ದರು. ನಮ್ಮ ಊರಿನ ಕೆರೆಗಳನ್ನು ನಾವು ಉಳಿಸಿಕೊಂಡು ಹೋಗಬೇಕು’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

‘ಎಲ್ಲ ರೀತಿಯ ಅನ್ಷೇಷಣೆಗಳನ್ನು ಮಾಡಿರುವ ವಿಜ್ಞಾನಿಗಳು ನೀರನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಪ್ರಕೃತಿ ನೀಡಿರುವ ಜಲಮೂಲಗಳನ್ನು ಉಳಿಸಬೇಕು. ಕೆರೆ ಒತ್ತುವರಿ ನಿಲ್ಲಿಸಬೇಕು. ಕೆರೆ ಸಂರಕ್ಷಣ ಪ್ರಾಧಿಕಾರದ ಅನುದಾನ ಬಳಸಿಕೊಂಡು, ದಾಸನಪುರ ಕ್ಷೇತ್ರದ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ‌ಎಲ್.ಎಚ್. ಮಂಜುನಾಥ್,‘ ಇದು ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವ 251ನೇ ಕೆರೆ. ಸಂಸ್ಥೆಯು ₹35 ಕೋಟಿ ವೆಚ್ಚದಲ್ಲಿ ರಾಜ್ಯದ ಹಲವು ಕೆರೆಗಳನ್ನು ಅಭಿವೃದ್ದಿಪಡಿಸಿದೆ. ಶುದ್ಧಗಂಗಾ ಯೋಜನೆಯಲ್ಲಿ ಕ್ಷೇತ್ರವು ಹತ್ತು ಪೈಸೆಗೆ ಒಂದು ಲೀಟರ್ ನೀರು ಕೊಟ್ಟಿದೆ. 300 ಘಟಕಗಳ ಮೂಲಕ 70 ಸಾವಿರ ಕುಟುಂಬಗಳು ಇದರ ಅನುಕೂಲ ಪಡೆಯುತ್ತಿವೆ’ ಎಂದರು.

ಕಳಸ ನೀಡುವ ಮೂಲಕ ಗೋಪಾಲಪುರ ಗ್ರಾಮ ಪಂಚಾಯಿತಿಗೆ ಕೆರೆಯ ನಿರ್ವಹಣೆಯನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ರವಿಕುಮಾರ್ ನಿರ್ಗತಿಕರಿಗೆ ಮಾಸಾಶನ ವಿತರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು