ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸದಾಗಿ ಸ್ಥಾಪಿಸಿರುವ ‘ಸಂತ ಶಿಶುನಾಳ ಶರೀಫ ಮತ್ತು ಅವರ ಗುರುಗಳಾದ ಕಳಸದ ಗೋವಿಂದ ಭಟ್ಟರ ದತ್ತಿ’ ಪುರಸ್ಕಾರಕ್ಕೆ ಯಜಮಾನ್ ಎಂಟರ್ಪ್ರೈಸಸ್ ಸಂಸ್ಥೆಯ ದಿವಂಗತ ಶ್ರೀಹರಿ ಖೋಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಶ್ರೀಹರಿ ಖೋಡೆ ಅವರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದರು. ಕಾವೇರಿ ದಂಡೆಯಲ್ಲಿ ಅವರು ಜೀರ್ಣೋದ್ದಾರಗೊಳಿಸಿದ ವೇಣುಗೋಪಾಲ ಸ್ವಾಮಿ ದೇಗುಲ ಉತ್ತಮ ವಾಸ್ತುಶಿಲ್ಪ ಎನ್ನಿಸಿಕೊಂಡಿದೆ.

‘ಮೈಸೂರು ಮಲ್ಲಿಗೆ’, ‘ನಾಗಮಂಡಲ’ ಚಿತ್ರ ಗಳನ್ನು ನಿರ್ಮಿಸಿರುವ ಅವರು, 2016ರಲ್ಲಿ ನಿಧನರಾದರು. ಅವರ ಪರಂಪರೆಯನ್ನು ‘ಯಜಮಾನ್ ಎಂಟರ್ಪ್ರೈಸಸ್’ ಮುಂದುವರಿಸುತ್ತಿದೆ. ಹೀಗಾಗಿ ಅವರದ್ದೇ ಆದ ಈ ಸಂಸ್ಥೆ, ಅವರ ಹೆಸರು ಎರಡನ್ನೂ ಸೇರಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.