ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳ 369 ವಾರ್ಡ್ಗಳಿಗೆ ಕರಡು ಮೀಸಲಾತಿ ನಿಗದಿಪಡಿಸಿ, ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆ, ದಕ್ಷಿಣ ನಗರ ಪಾಲಿಕೆ, ಕೇಂದ್ರ ನಗರ ಪಾಲಿಕೆ, ಪೂರ್ವ ನಗರ ಪಾಲಿಕೆ ಹಾಗೂ ಪಶ್ಚಿಮ ನಗರ ಪಾಲಿಕೆಗಳಿಗೆ 369 ವಾರ್ಡ್ಗಳನ್ನು ಪುನರ್ ವಿಂಗಡಿಸಿ, 2025ರ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಡಿಸೆಂಬರ್ 1ರಂದು ಕೆಲವು ವಾರ್ಡ್ಗಳ ಗಡಿ ಹಾಗೂ ಹೆಸರನ್ನು ಬದಲಿಸಿ ತಿದ್ದುಪಡಿ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು.

2011ರ ಜನಗಣತಿ ಆಧಾರದಲ್ಲಿ ವಾರ್ಡ್ವಾರು ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಐದು ನಗರ ಪಾಲಿಕೆಗಳಲ್ಲಿ ಬಹುತೇಕ ಶೇ 50ರಷ್ಟು ಸ್ಥಾನವನ್ನು ಎಲ್ಲ ವರ್ಗದಲ್ಲೂ ಸೇರಿದಂತೆ ಮಹಿಳೆಯರಿಗೆ ಮೀಸಲಿರಿಸಲಾಗಿದೆ.

ವಾರ್ಡ್ವಾರು ಕರಡು ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸಲು 15 ದಿನ ಅವಕಾಶ ನೀಡಲಾಗಿದೆ. ವಿಕಾಸಸೌಧದಲ್ಲಿ 436ನೇ ಕೊಠಡಿಯಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಕಚೇರಿಗೆ ಜನವರಿ 23ರೊಳಗೆ ಆಕ್ಷೇಪಣೆ/ ಸಲಹೆಗಳನ್ನು ಸೂಕ್ತ ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ.

ಹಿನ್ನೆಲೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ–2020 ಅನ್ನೂ ಸೇರಿಸಿಕೊಂಡು, ಹೊಸ ನಗರ ಪಾಲಿಕೆಗಳನ್ನು ರಚಿಸಲು ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ’ 2025ರ ಮೇ 15ರಂದು ಜಾರಿಯಾಯಿತು. ಈ ಕಾಯ್ದೆಯಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ನಗರ ಪಾಲಿಕೆಗಳನ್ನು 2025ರ ಸೆಪ್ಟೆಂಬರ್ 2ರಂದು ರಚಿಸಿ ಅಧಿಸೂಚಿಸಲಾಯಿತು. ಸೆಪ್ಟೆಂಬರ್ 30ರಂದು ವಾರ್ಡ್ಗಳನ್ನು ಪುನರ್ವಿಂಗಡಿಸಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ನವೆಂಬರ್ 1ಕ್ಕೆ ಅಂತಿಮ ಅಧಿಸೂಚನೆಯಾಗಬೇಕಿದ್ದನ್ನು ತಡೆ ಹಿಡಿದು, ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ 15 ದಿನದಲ್ಲಿ ವಾರ್ಡ್ಗಳನ್ನು ಅಂತಿಮಗೊಳಿಸಿ ಎಂದು ನವೆಂಬರ್ 4ರಂದು ಸೂಚಿಸಿತ್ತು. ಅದರಂತೆ, ಪುನರ್ ವಿಂಗಡಿಸಿದ ವಾರ್ಡ್ಗಳ ಅಂತಿಮ ಅಧಿಸೂಚನೆಯನ್ನು ನವೆಂಬರ್ 19ರಂದು ಹೊರಡಿಸಲಾಗಿತ್ತು.

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಂತೆ ಐದು ನಗರ ಪಾಲಿಕೆಗಳ ವಾರ್ಡ್ ಮೀಸಲಾತಿ ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಸೆಪ್ಟೆಂಬರ್ 29ರಂದು ಸಮಿತಿ ರಚಿಸಲಾಗಿತ್ತು. ಈ ಸಮಿತಿ ಡಿ.12ರಂದು ಸಭೆ ನಡೆಸಿ ವಾರ್ಡ್ ಮೀಸಲಾತಿ ನಿಗದಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಮನವಿ ಮಾಡಿತ್ತು. ಅದರಂತೆ, ವಾರ್ಡ್ಗಳ ಮೀಸಲಾತಿ ನಿಗದಿಪಡಿಸಲು 12 ಮಾರ್ಗಸೂಚಿಗಳನ್ನು ನಿಗದಿಪಡಿಸಿ ಡಿಸೆಂಬರ್ 19ರಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿತ್ತು. ಇದಾದ 20 ದಿನಗಳೊಳಗೆ ಕರಡು ಮೀಸಲಾತಿ ಅಧಿಸೂಚನೆ ಹೊರಬಿದ್ದಿದೆ.

ಮಾರ್ಚ್ 16ರಂದು ಮತದಾರರ ಅಂತಿಮ ಪಟ್ಟಿ

ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್ವಾರು ಮತದಾರರ ಪಟ್ಟಿ ತಯಾರಿಸುವ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ವಿಸ್ತರಿಸಿದ್ದು 2026ರ ಮಾರ್ಚ್ 16ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ.

ರಾಜ್ಯ ಚುನಾವಣಾ ಆಯೋಗ 2025ರ ಅಕ್ಟೋಬರ್ 27ರಂದು ಪ್ರಕಟಿಸಿದ್ದ ವೇಳಾಪಟ್ಟಿ ಪ್ರಕಾರ 2026ರ ಜನವರಿ 29ರಂದು ವಾರ್ಡ್ವಾರು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು. ಇದರಂತಾಗಿದ್ದರೆ ಫೆಬ್ರುವರಿ ಅಥವಾ ಮಾರ್ಚ್ನಲ್ಲಿ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿತ್ತು. ವೇಳಾಪಟ್ಟಿ ಒಂದೂವರೆ ತಿಂಗಳು ವಿಸ್ತರಣೆಯಾಗಿರುವುದರಿಂದ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ವಾರ್ಡ್ಗಳ ಮತದಾರರ ಅಂತಿಮಪಟ್ಟಿ ಮಾರ್ಚ್ 19ಕ್ಕೆ ಸಿದ್ಧಗೊಂಡು ವಾರ್ಡ್ವಾರು ಮೀಸಲಾತಿಯೂ ಆ ವೇಳೆಗೆ ಅಂತಿಮಗೊಳಿಸಿ ಸರ್ಕಾರ ನೀಡಿದರೆ ಮಾರ್ಚ್ ಅಂತ್ಯದಲ್ಲಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗುತ್ತದೆ. ಅದಾದ 45 ದಿನಗಳಲ್ಲಿ ಚುನಾವಣೆಯ ಎಲ್ಲ ಪ್ರಕ್ರಿಯೆ ಮುಗಿಯಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.