ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ನಗರದ 110 ಹಳ್ಳಿಗಳು ಸೇರಿದಂತೆ 80 ವಾರ್ಡ್ಗಳು ಹೆಚ್ಚು ನೀರಿನ ಕೊರತೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ಬೆಂಗಳೂರು ಜಲಮಂಡಳಿ ಸಹಯೋಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ವಿಜ್ಞಾನಿಗಳು ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ನಗರದಲ್ಲಿ ನೀರಿನ ಕೊರತೆ ಕುರಿತು ಆರು ತಿಂಗಳು ನಡೆಸಿರುವ ಅಧ್ಯಯನದ ವರದಿಯನ್ನು ಐಐಎಸ್ಸಿ ವಿಜ್ಞಾನಿಗಳು ಇತ್ತೀಚೆಗೆ ಜಲಮಂಡಳಿಗೆ ಸಲ್ಲಿಸಿದ್ದಾರೆ. ವರದಿಯಲ್ಲಿ, ಫೆಬ್ರುವರಿಯಲ್ಲಿ ಅಂತರ್ಜಲ ಕುಸಿತ ಪ್ರಾರಂಭವಾಗಿ, ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಹೆಚ್ಚಾಗುವುದಾಗಿ ಉಲ್ಲೇಖಿಸಲಾಗಿದೆ. ಹಾಗೆಯೇ, ನೀರಿನ ಕೊರತೆ ಎದುರಿಸಬಹುದಾದ ವಾರ್ಡ್ಗಳ ಪಟ್ಟಿಯನ್ನೂ ನೀಡಲಾಗಿದೆ.

ಅಂತರ್ಜಲ ಕುಸಿತ: ನಗರದ ಕೇಂದ್ರ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸುಮಾರು 5 ಮೀಟರ್ಗಳಷ್ಟು, ಸಿಎಂಸಿ ಪ್ರದೇಶದಲ್ಲಿ 10 ಮೀಟರ್ನಿಂದ 15 ಮೀಟರ್ಗಳಷ್ಟು ಮತ್ತು 110 ಹಳ್ಳಿಗಳ ವ್ಯಾಪ್ತಿಯಲ್ಲಿ 20 ಮೀಟರ್ನಿಂದ 25 ಮೀಟರ್ಗಳಷ್ಟು ಕುಸಿಯುವ ಸಾಧ್ಯತೆ ಇದೆ. ಇವುಗಳನ್ನು ಕ್ರಿಟಿಕಲ್ ವಾರ್ಡ್ಗಳೆಂದು ಗುರುತಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊಳವೆಬಾವಿ ಅವಲಂಬನೆ : ನಗರದಲ್ಲಿ ಪ್ರತಿನಿತ್ಯ ಸುಮಾರು 800 ದಶಲಕ್ಷ ಲೀಟರ್ ನೀರನ್ನು ಕೊಳವೆ ಬಾವಿಗಳಿಂದ ತೆಗೆದು ಬಳಸಲಾಗುತ್ತಿದೆ. 110 ಹಳ್ಳಿಗಳು, ಆಗ್ನೇಯ ಭಾಗ ಹಾಗೂ ವೈಟ್ಫೀಲ್ಡ್ ಭಾಗದಲ್ಲಿ ಕೊಳವೆ ಬಾವಿಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದನ್ನು ವರದಿಯಲ್ಲಿ ತಿಳಿಸಲಾಗಿದೆ.

ವರದಿ ಕುರಿತು ಶನಿವಾರ ಸಭೆ ನಡೆಸಿದ ಜಲಮಂಡಳಿ ಅಧ್ಯಕ್ಷ ವಿ. ರಾಮ್ಪ್ರಸಾತ್ ಮನೋಹರ್, ‘ತಜ್ಞರು ತಿಳಿಸಿರುವಂತೆ, ನೀರಿನ ಸಮಸ್ಯೆ ಎದುರಾಗಲಿರುವ ವಾರ್ಡ್ಗಳಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಜನರ ಮನವೊಲಿಸುವ ಮೂಲಕ ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕಾವೇರಿ 5 ನೇ ಹಂತದ ಯೋಜನೆ ಅನುಷ್ಠಾನದ ನಂತರ ಜಲಮಂಡಳಿಯಲ್ಲಿ ನೀರಿನ ಲಭ್ಯತೆ ಉತ್ತಮವಾಗಿದೆ. ಕೊಳವೆಬಾವಿ, ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿರುವ ಅಪಾರ್ಟ್ಮೆಂಟ್ಗಳು, ಬಡಾವಣೆಗಳು ಹಾಗೂ ಕಟ್ಟಡಗಳು, ತಕ್ಷಣವೇ ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

‘ದೇಶದಲ್ಲಿ ಇದೇ ಮೊದಲ ಬಾರಿಗೆ ನಗರಕ್ಕೆ ಸೀಮಿತವಾಗಿ ಅಂತರ್ಜಲ ಕುರಿತ ವೈಜ್ಞಾನಿಕ ಅಧ್ಯಯನವೊಂದನ್ನು ಕೈಗೊಳ್ಳಲಾಗಿದೆ. ವಿಜ್ಞಾನಿಗಳು ಸಮಸ್ಯೆಗಳ ಜೊತೆಗೆ, ಪರಿಹಾರವನ್ನೂ ಸೂಚಿಸಿದ್ದಾರೆ’ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.