ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಲಾ ಹಂತದಲ್ಲೇ ಕನ್ನಡಕ್ಕೆ ಕೊನೆ ಮೊಳೆ’

ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಸಾಹಿತ್ಯ ಮಂಥನ
Last Updated 11 ಆಗಸ್ಟ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು:‘ರಾಜ್ಯದಲ್ಲಿ ಸಾವಿರಾರು ಇಂಗ್ಲಿಷ್‌ ಮಾಧ್ಯಮದ ಶಾಲೆ ಪ್ರಾರಂಭಿಸುವ ಮೂಲಕ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಕನ್ನಡದ ಅವನತಿಗೆ ಸರ್ಕಾರವು ಕೊನೆ ಮೊಳೆ ಹೊಡೆದಿದೆ’ ಎಂದು ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ರಾಷ್ಟ್ರಕವಿಗಳ ಸಾಹಿತ್ಯ ಮಂಥನ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿಕ್ಷಣ ವ್ಯವಸ್ಥೆ ಇತ್ತೀಚೆಗೆ ಉದ್ಯಮವಾಗಿದೆ. ಕನ್ನಡ ಅಳಿಯುತ್ತಿದೆ. ಇದು ಎಲ್ಲರಿಗೂ ತಿಳಿದಿದ್ದರೂ, ಯಾರೊಬ್ಬರೂ ಧ್ವನಿ ಎತ್ತದಿರುವುದು ವಿಪರ್ಯಾಸ’ ಎಂದರು.

ದೂರದೃಷ್ಟಿ ಹೊಂದಿದ್ದ ಜಿ.ಎಸ್.ಎಸ್:‘ಭೇದ ಭಾವವಿಲ್ಲದ, ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸುವ ದೂರದೃಷ್ಟಿ ಸಾಮರ್ಥ್ಯವನ್ನು ಜಿ.ಎಸ್.ಎಸ್‌.ಹೊಂದಿದ್ದರು. ಅವರ ಕಾಲಘಟ್ಟದಲ್ಲಿರಾಜ್ಯದ ಎಲ್ಲ ವಿ.ವಿಗಳ ಪ್ರಸಾರಾಂಗ ವಿಭಾಗಗಳು ಕರಪತ್ರ ಸೇರಿದಂತೆ ಹಲವು ಕೃತಿ ಪ್ರಕಟಿಸುವ ಮೂಲಕ ಓದುಗರ ಸಂಖ್ಯೆ ಹೆಚ್ಚಿಸುವ, ಜ್ಞಾನ ವೃದ್ಧಿಸುವ ಕೆಲಸ ಮಾಡಿದವು’ ಎಂದು ಸಿದ್ಧರಾಮಯ್ಯ ಹೇಳಿದರು.

‘ಈಗ ವಿ.ವಿಗಳಲ್ಲಿ ಹಳಗನ್ನಡ ಓದಲು ನಿವೃತ್ತ ಪ್ರಾಧ್ಯಾಪಕರನ್ನು ಅವಲಂಬಿಸುವ ಸ್ಥಿತಿಯಿದೆ’ ಎಂದು ಬೇಸರಿಸಿದರು.

‘ಭವಿಷ್ಯದ ಸಾಹಿತಿಗಳಿಗೆ ಜಿ.ಎಸ್.ಎಸ್. ಕೃತಿಗಳು ದಾರಿದೀಪದಂತಿವೆ’ ಎಂದರು.

ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಡಾ. ಜಿ.ಎಸ್.ಎಸ್. ಸಾಹಿತ್ಯ ಮಂಥನ ಕಾರ್ಯಕ್ರಮದಲ್ಲಿ ಡಾ. ಎಲ್.ಜಿ. ಮೀರಾ, ಡಾ. ಎಚ್.ದಂಡಪ್ಪ, ಡಾ. ಬೈರಮಂಗಲ ರಾಮೇಗೌಡ ಪ್ರಬಂಧ ಮಂಡಿಸಿದರು.

ಬಿ.ಆರ್. ರವೀಂದ್ರನಾಥ್, ಡಾ. ವಿಜಯಾ ಸುಬ್ಬರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT