ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌ಗೆ ಒಳಗಾಗುತ್ತಿರುವವರ ಪ್ರತಿಭಾ ಶೋಧಕ್ಕಾಗಿ ಗೆಸ್ಟ್ಸ್ ಗಾಟ್ ಟ್ಯಾಲೆಂಟ್

Last Updated 5 ಅಕ್ಟೋಬರ್ 2020, 14:02 IST
ಅಕ್ಷರ ಗಾತ್ರ

ಬೆಂಗಳೂರು: ಡಯಾಲಿಸಿಸ್‌ಗೆ ಒಳಗಾಗುತ್ತಿರುವ ಜನರ ವಿಶಿಷ್ಟ ಪ್ರತಿಭೆಯನ್ನು ಗುರುತಿಸಲು ಗೆಸ್ಟ್ಸ್ ಗಾಟ್ ಟ್ಯಾಲೆಂಟ್ ಸೀಸನ್ 3 ಆರಂಭವಾಗಿದ್ದು, ಈ ತಿಂಗಳ ಕೊನೆಯವರೆಗೆ ನಡೆಯಲಿದೆ.

ಡಯಾಲಿಸಿಸ್ ನೆಟ್‌ವರ್ಕ್ ಆಗಿರುವ ನೆಫ್ರೊಪ್ಲಸ್ ಆರಂಭಿಸಿರುವ ಈ ಸ್ಫರ್ಧೆಯ ಮೂಲಕ, ಡಯಾಲಿಸಿಸ್‌ಗೆ ಒಳಪಡುತ್ತಿರುವ ರೋಗಿಗಳಿಗೆ ಅವರ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಲಾಗುತ್ತಿದ್ದು, ಅವರಲ್ಲಿ ಆತ್ಮವಿಶ್ವಾಸವನ್ನೂ ತುಂಬುವ ಕೆಲಸ ಮಾಡಲಾಗುತ್ತದೆ.

ಆರೋಗ್ಯದ ತೊಂದರೆಗಳ ನಡುವೆಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಸಾಹವಿರುವ ಡಯಾಲಿಸಿಸ್ ರೋಗಿಗಳು ತಮ್ಮ ಫೈಲ್ ಅನ್ನು ನೆಫ್ರೊಪ್ಲಸ್‌ನ ಫೇಸ್‌ಬುಕ್/ ಟ್ವಿಟರ್ ಪುಟದಲ್ಲಿ (https://www.facebook.com/NephroPlusDialysisNetwork/) #GuestsGotTalent3/#NephroPlus ಹ್ಯಾಶ್‌ಟ್ಯಾಗ್‌ನೊಂದಿಗೆ ಅಪ್‌ಲೋಡ್ ಮಾಡಬಹುದು. ರೋಗಿಯು ತಮ್ಮ ಹೆಸರು, ಸಂಪರ್ಕ ವಿವರಗಳು, ಡಯಾಲಿಸಿಸ್ ಸೆಂಟರ್ ಮತ್ತು ನಗರದ ಜೊತೆಗೆ ಅವರ ಪ್ರತಿಭೆಯನ್ನು ಪ್ರದರ್ಶಿಸುವ ಒಂದು ನಿಮಿಷದ ವಿಡಿಯೊ ಕ್ಲಿಪ್ ಸಲ್ಲಿಸಬೇಕಾಗುತ್ತದೆ. ಭಾಗೀದಾರರಿಂದ ಪಡೆದ ನಮೂದುಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಅ.30ರಂದು ಪ್ರತಿಭಾ ಶೋಧ ಕಾರ್ಯಕ್ರಮದ ಅಂತ್ಯದವರೆಗೆ ನೆಫ್ರೊಪ್ಲಸ್ ಪ್ರತಿ ವಾರ ಅಪ್‌ಲೋಡ್ ಮಾಡುತ್ತದೆ.

ಅಂತಿಮವಾಗಿ ಪಟ್ಟಿ ಮಾಡಿದ ನಮೂದುಗಳಿಂದ ಟೆಲಿವಿಷನ್ ಮತ್ತು ಮಾಧ್ಯಮ ಉದ್ಯಮದ ಪ್ರಖ್ಯಾತ ತೀರ್ಪುಗಾರರ ತಂಡವು 3 ವಿಜೇತರನ್ನು ಗುರುತಿಸುತ್ತದೆ. ನೆಫ್ರೊಪ್ಲಸ್ ಪ್ರತಿ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ಮತ್ತು ರೇಡಿಯೊ ಚಾನೆಲ್ ಸಂದರ್ಶನದಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ನೀಡಿ ಸನ್ಮಾನಿಸುತ್ತದೆ.

ಮೊದಲೆರಡು ಸೀಸನ್‌ಗಳ ಅಭೂತಪೂರ್ವ ಪ್ರತಿಕ್ರಿಯೆಯ ನಂತರ ‘ಗೆಸ್ಟ್ಸ್ ಗಾಟ್ ಟ್ಯಾಲೆಂಟ್’ ಮೂರನೇ ಸೀಸನ್ ಆರಂಭಿಸಲು ಹೆಮ್ಮೆಯಾಗುತ್ತಿದೆ. ಪ್ರತಿಯೊಬ್ಬನಲ್ಲೂ ಕೆಲವು ವಿಶೇಷ ಪ್ರತಿಭೆಗಳಿವೆ. ಆದರೆ ಈ ರೋಗಿಗಳು ತಮ್ಮ ನ್ಯೂನತೆಯ ಚಿಂತೆಯಿಂದ ದೂರ ಸರಿದು, ಆತ್ಮವಿಶ್ವಾಸ ವೃದ್ಧಿ ಮಾಡಿಕೊಳ್ಳಲು ಇದು ವೇದಿಕೆ ಎಂದು ಸಂಸ್ಥಾಪಕ ಮತ್ತು ಸಿಇಒ ವಿಕ್ರಮ್ ವುಪ್ಪ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT