ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಫ್ತಾ ಕೊಡದಿದ್ದಕ್ಕೆ ಹಲ್ಲೆ; ಪೊಲೀಸರ ವಿರುದ್ಧ ಬೇಸರ

Last Updated 5 ನವೆಂಬರ್ 2020, 18:38 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ರಮೇಶ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ದೂರು ನೀಡಿದರೂ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಸಂಬಂಧಿಕರು ಆರೋಪಿಸಿದ್ದಾರೆ.

ನಗರ ಪೊಲೀಸ್ ಕಮಿಷನರ್ ಕಚೇರಿಗೆ ಬಂದಿದ್ದ ಸಂಬಂಧಿಕರು, ‘ಹಲ್ಲೆಯಿಂದಾಗಿ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಮನವಿ ಮಾಡಿದರು.

‘ಯಲಹಂಕ ಬಳಿಯ ಬಾಗಲೂರು ಕ್ರಾಸ್‌ನಲ್ಲಿ ರಾಜಸ್ಥಾನದ ರಮೇಶ್ ಅಂಗಡಿ ಇಟ್ಟುಕೊಂಡು
ಜೀವನ ಮಾಡುತ್ತಿದ್ದಾರೆ. ಬುಧವಾರ ಅಂಗಡಿ ಬಳಿ ಬಂದಿದ್ದ ದುಷ್ಕರ್ಮಿಗಳು, ಹಫ್ತಾ ನೀಡುವಂತೆ ಒತ್ತಾಯಿಸಿದ್ದರು. ಹಣ ನೀಡಲು ರಮೇಶ್ ನಿರಾಕರಿಸಿದ್ದರು.’

‘ಹಫ್ತಾ ನೀಡಲಿಲ್ಲವೆಂದು ಸಿಟ್ಟಾಗಿದ್ದ ದುಷ್ಕರ್ಮಿಗಳು, ಆಟೊದಲ್ಲಿ ಬಂದು ರಮೇಶ್ ಮೇಲೆ ದಾಳಿ ಮಾಡಿದ್ದರು. ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಯಲಹಂಕ ಠಾಣೆಗೆ ದೂರು ನೀಡ
ಲಾಗಿದ್ದು, ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ’ ಎಂದೂ ದೂರಿದರು.

ಸಂಬಂಧಿಕರ ಜೊತೆ ಸ್ಥಳೀಯ ವ್ಯಾಪಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT