ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳ್ಳಿಕಾರ್ ತಳಿ ಉಳಿಯಬೇಕು: ಮಾಜಿ ಶಾಸಕ ಅರವಿಂದ ಲಿಂಬಾವಳಿ

Published 16 ಜೂನ್ 2024, 16:20 IST
Last Updated 16 ಜೂನ್ 2024, 16:20 IST
ಅಕ್ಷರ ಗಾತ್ರ

ಕೆ.ಆರ್.ಪುರ: ಭಾರತದ ಗೋವು ಪರಂಪರೆಯಲ್ಲಿ ಅಳಿವನಂಚಿನಲ್ಲಿರುವ ತಳಿಗಳಲ್ಲಿ ಒಂದಾದ ಹಳ್ಳಿಕಾರ್‌ ತಳಿಯನ್ನು ಉಳಿಸಿ, ಪೋಷಿಸಬೇಕಾಗಿದೆ ಎಂದು ಮಾಜಿ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಕೆ.ಆರ್.ಪುರ ಸಮೀಪದ ರಾಮಗೊಂಡನಹಳ್ಳಿಯಲ್ಲಿ ಹಳ್ಳಿಕಾರ್ ಹೋರಿಗಳ ಮೆರವಣಿಗೆ ಮತ್ತು ವಿವಿಧ ಕ್ಷೇತ್ರಗಳ ಬಸಪ್ಪನವರುಗಳ ಮತ್ತು ಶ್ರೀ ದುಗ್ಗಮ್ಮ ದೇವಿ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರೈತರ ಜೀವನಾಡಿಯಾಗಿರುವ ಹಳ್ಳಿಕಾರ್ ತಳಿ ನಶಿಸಲು ಬಿಡದೆ ಪೋಷಿಸುವ ಹೊಣೆ ಹೊರಬೇಕು. ಹಳ್ಳಿಕಾರ್ ತಳಿ ರಕ್ಷಣೆಗೆ ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.

ಕಾರ್ಯಕ್ರಮ ಆಯೋಜಕ ರಾಮಗೊಂಡನಹಳ್ಳಿ ಸಂಜೀವ್ ಮಾತನಾಡಿ, ಹಳ್ಳಿಕಾರ್ ರಾಸುಗಳನ್ನು ಉಳಿಸುವ ಉದ್ದೇಶದಿಂದ ಬೀಜದ ಹೋರಿಗಳ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ರಾಸುಗಳ ಜೊತೆಗೆ ಮಾಲಿಕರು ಪಾಲ್ಗೊಂಡಿದ್ದರು. ಮಾಲಿಕರಿಗೆ ಒಂದು ಗ್ರಾಂ ಚಿನ್ನ ಬಹುಮಾನ ರೂಪವಾಗಿ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ, ನಟ ಧ್ರುವಸರ್ಜಾ, ಎನ್.ನಾರಾಯಣಸ್ವಾಮಿ, ಸಂಜೀವ್, ಎಲ್.ರಾಜೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT