ಟೆಲಿಗ್ರಾಮ್ ಚಾನೆಲ್ ಆರಂಭ

ಬೆಂಗಳೂರು: ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ಒದಗಿಸುವ ಟೆಲಿಗ್ರಾಮ್ ಚಾನೆಲ್ ಅನ್ನು ಹೈಕೋರ್ಟ್ ಪ್ರಾರಂಭಿಸಿದೆ. ಹೈಕೋರ್ಟ್ ವರ್ಚುವಲ್ ಕೇಸ್ ಇನ್ಫರ್ಮೇಷನ್ ಸರ್ವೀಸ್ ಎಂಬ ಹೆಸರಿನಲ್ಲಿ ಟೆಲಿಗ್ರಾಮ್ ಚಾಟ್‌ಬಾಟ್ (HCKChatBot) ಅಭಿವೃದ್ಧಿಪಡಿಸಲಾಗಿದೆ.
ಇ–ನ್ಯಾಯಾಲಯದ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆಯ ಸ್ಥಿತಿ, ದೈನಂದಿನ ಆದೇಶಗಳು ಈ ಚಾನೆಲ್‌ನಲ್ಲಿ ಲಭ್ಯವಾಗಲಿವೆ. ಚಾನೆಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು ಗುರುವಾರ ಉದ್ಘಾಟಿಸಿದರು.
‘ಈಗಾಗಲೇ 6,500 ಸದಸ್ಯರು ಹೈಕೋರ್ಟ್ ಚಾನೆಲ್‌ನ ಚಂದಾದಾರರಾಗಿದ್ದಾರೆ ಮತ್ತು 5 ಸಾವಿರಕ್ಕೂ ಹೆಚ್ಚು ಸದಸ್ಯರು ಜಿಲ್ಲಾ ನ್ಯಾಯಾಲಯಗಳ ಚಾನೆಲ್‌ನ ಚಂದಾದಾರರಾಗಿದ್ದಾರೆ’ ಎಂದು ಅವರು ಹೇಳಿದರು.
‘ವಕೀಲರು, ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ಈ ಸೇವೆ ಉಪಯೋಗ ಆಗಲಿದೆ. ಡಿಜಿಟಲ್ ಯುಗದಲ್ಲಿ ನೈಜ ಸಮಯದಲ್ಲಿ ಎಲ್ಲಾ ವಿಚಾರಣೆಗಳನ್ನು ಜನ ನೋಡಬಹುದಾಗಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.