‘ಬೆಳಿಗ್ಗೆ 8.30 ರಿಂದ 3 ಗಂಟೆವರೆಗೆ ಶಿಬಿರ ನಡೆಯಲಿದೆ. ತಜ್ಞ ವೈದ್ಯರಿಂದ ರೋಗ ತಪಾಸಣೆ ಮಾಡಲಾಗುತ್ತದೆ. ಸ್ತ್ರೀರೋಗ ಮತ್ತು ಪ್ರಸೂತಿ, ಮೂಳೆ ಮತ್ತು ಕೀಲು ರೋಗ ಸೇರಿದಂತೆ ವಿವಿಧ ರೋಗಗಳ ಪರೀಕ್ಷೆ ನಡೆಸಲಾಗುತ್ತದೆ‘ ಎಂದು ಅರ್ಪಿತಾ ಸೇವಾ ಟ್ರಸ್ಟ್ ಅಧ್ಯಕ್ಷ ಲಗ್ಗೆರೆ ನಾರಾಯಣ ಸ್ವಾಮಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 9620110550, 8884439153, 9901697666.