ಬೆಂಗಳೂರು: ನಗರದಲ್ಲಿ ಮಳೆ ಆರ್ಭಟ ಬುಧವಾರ ರಾತ್ರಿಯೂ ಮುಂದುವರಿದು ಮತ್ತೆ ಅವಾಂತರ ಸೃಷ್ಟಿಸಿತು. ಎರಡನೇ ದಿನದ ಮಳೆಗೆ ರಾಜಧಾನಿ ಮತ್ತೆ ತತ್ತರಿಸಿದೆ.

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ನಾಯಂಡಹಳ್ಳಿ ಸಮೀಪದದ ಪ್ರಮೋದ್ ಲೇಔಟ್ನಲ್ಲಿ ರಾಜಕಾಲುವೆ ತಡೆಗೋಡೆ ಒಡೆದು ಮನೆಗಳಿಗೆ ನೀರು ನುಗ್ಗಿದೆ.

ರಾಜಕಾಲುವೆ ನೀರು ಅಕ್ಕ–ಪಕ್ಕದ ಮನೆಗಳಿಗೆ ಏಕಾಏಕಿ ಮನೆಗಳಿಗೆ ಆವರಿಸಿದ್ದರಿಂದ ನಿದ್ರೆಯಲ್ಲಿದ್ದ ಜನರು ಪ್ರಾಣ ರಕ್ಷಿಸಿಕೊಳ್ಳಲು ಮನೆಯಿಂದ ಹೊರೆಗೆ ಓಡಿ ಬಂದರು. ಮನೆಯಲ್ಲಿ ಐದು ಅಡಿಯಿಂದ ಎಂಟು ಅಡಿಗಳಷ್ಟು ನೀರು ನಿಂತಿದ್ದು, ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.

ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ದವಸ–ಧಾನ್ಯ, ಬಟ್ಟೆಗಳು, ಪೀಠೋಪಕರಣಗಳು ನೀರಿನಲ್ಲಿ ಮುಳುಗಿವೆ. ಕಾರುಗಳು, ಬೈಕ್ಗಳು ನೀರಿನಲ್ಲಿ ಮುಳುಗಿವೆ. ಇಡೀ ರಾತ್ರಿ ಜನ ಸಂಕಷ್ಟ ಅನುಭವಿಸುತ್ತಿದ್ದರೆ ಬಿಬಿಎಂಪಿ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ...Photos: ಬೆಂಗಳೂರಿನಲ್ಲಿ ಭಾರಿ ಮಳೆ, ಮನೆಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.