ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ದಾಖಲೆ ಮಳೆ: ಧರೆಗುರುಳಿದ ನೂರಾರು ಮರ

ಹಲವು ಪ್ರದೇಶಗಳಲ್ಲಿ ಮನೆಗೆ ನುಗ್ಗಿದ ನೀರು; ಆಟೊ, ಕಾರುಗಳು ಜಖಂ
Published 3 ಜೂನ್ 2024, 23:53 IST
Last Updated 3 ಜೂನ್ 2024, 23:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ದಾಖಲೆ ಮಳೆಗೆ, 265 ಮರಗಳು ಧರೆಗುರುಳಿವೆ. ನೂರಾರು ವಿದ್ಯುತ್‌ ಕಂಬಗಳೂ ನೆಲಕ್ಕೆ ಬಿದ್ದಿದ್ದರಿಂದ ಹತ್ತಾರು ವಾಹನಗಳು ಜಖಂಗೊಂಡಿವೆ. ಸೋಮವಾರ ಮಧ್ಯಾಹ್ನದವರೆಗೂ ಹಲವು ಪ್ರದೇಶಗಳು, ರಸ್ತೆಗಳು ನೀರಿನಿಂದ ತುಂಬಿದ್ದವು.

ಬಿರುಗಾಳಿಯಿಂದ ಧಾರಾಕಾರವಾಗಿ ಸುರಿದ ಮಳೆ, ಮರಗಳನ್ನು ಧರೆಗುರುಳಿಸಿತು. ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ಅತಿಹೆಚ್ಚು ಮರಗಳು ಬಿದ್ದಿವೆ. ವಿಜಯನಗರ, ಹಂಪಿನಗರ, ಜಯನಗರ, ಬನಶಂಕರಿ ಪ್ರದೇಶಗಳಲ್ಲಿ ಮರಗಳು ಮನೆ ಹಾಗೂ ವಾಹನಗಳ ಮೇಲೆ ಬಿದ್ದಿವೆ. ಇವುಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಸೋಮವಾರ ಸಂಜೆಯವರೆಗೂ ಸಾಹಸಪಟ್ಟರು. ಆದರೂ, ರಸ್ತೆಗಳಲ್ಲಿ ಬಿದ್ದಿದ್ದ ಮರಗಳು, ಕೊಂಬೆಗಳು ಸಂಪೂರ್ಣ ತೆರವಾಗಲಿಲ್ಲ.

ಹಂಪಿನಗರದಲ್ಲಿ ಮರವೊಂದು ಮನೆಯ ಮೇಲೆ ಭಾನುವಾರ ರಾತ್ರಿ ಬಿದ್ದಿತ್ತು. ಸೋಮವಾರದ ಮಧ್ಯಾಹ್ನದವರೆಗೂ ಮರ ತೆರವುಗೊಳಿಸದ್ದರಿಂದ. ಆ ಕುಟುಂಬದವರ ಮನೆಯಿಂದ ಹೊರಬರಲಾರದೆ ಪರಿತಪಿಸಿದರು. ಪೈಪ್‌ಲೈನ್‌ ರಸ್ತೆಯಲ್ಲಿ ಮನೆ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಕೊಂಬೆಯೊಂದು ವ್ಯಕ್ತಿಯೊಬ್ಬರ ಮೇಲೆ ಬಿತ್ತು. ತಲೆಯಿಂದ ರಕ್ತಸುರಿಯುತ್ತಿದ್ದುದರಿಂದ ಅವರನ್ನು ಬಿಬಿಎಂಪಿ ಸಿಬ್ಬಂದಿ ಆಸ್ಪತ್ರೆಗೆ ಕೊಂಡೊಯ್ದರು.

ರಾಜರಾಜೇಶ್ವರಿನಗರ, ಬಸವೇಶ್ವರನಗರ, ಯಲಹಂಕ, ದಾಸರಹಳ್ಳಿ, ಪೀಣ್ಯ, ಕೆಂಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಿಡ–ಮರ ಹಾಗೂ ಕೊಂಬೆಗಳು ಬಿದ್ದವು. ನಗರದ ಹಲವು ಭಾಗಗಳಲ್ಲಿ ಕೆಲವು ಸ್ಕೂಟರ್‌, ಬೈಕ್‌, ಕಾರು, ಆಟೊಗಳ ಮೇಲೆ ಮರ ಬಿದ್ದು ಜಖಂಗೊಂಡವು. ಕೆಲ ಸವಾರರಿಗೆ ಸಣ್ಣಪುಟ್ಟ ಗಾಯಗಳಾದವು. 

ಬಸವೇಶ್ವರನಗರದ ಕೆ.ಎಚ್.ಬಿ. ಕಾಲೊನಿಯ 2ನೇ ಹಂತದ 3ನೇ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಮರಗಳ ನಡುವೆ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಹರಸಾಹಸ ಪಟ್ಟರು
– ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ
ಬಸವೇಶ್ವರನಗರದ ಕೆ.ಎಚ್.ಬಿ. ಕಾಲೊನಿಯ 2ನೇ ಹಂತದ 3ನೇ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಮರಗಳ ನಡುವೆ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಹರಸಾಹಸ ಪಟ್ಟರು – ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ
ಬಸವೇಶ್ವರನಗರದ ಯುನಾನಿ ಮೆಡಿಕಲ್ ಕಾಲೇಜಿನ ಬಳಿ ಆಟೊ ಮೇಲೆ ಮರವೊಂದು ಉರುಳಿಬಿದ್ದಿತ್ತು
– ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ
ಬಸವೇಶ್ವರನಗರದ ಯುನಾನಿ ಮೆಡಿಕಲ್ ಕಾಲೇಜಿನ ಬಳಿ ಆಟೊ ಮೇಲೆ ಮರವೊಂದು ಉರುಳಿಬಿದ್ದಿತ್ತು – ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ
ಬಸವೇಶ್ವರನಗರದ ಶಾರದಾ ಕಾಲೊನಿ 3ನೇ ಹಂತದಲ್ಲಿ ಮನೆ ಮೇಲೆ ಉರುಳಿದ್ದ ಮರ
ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ
ಬಸವೇಶ್ವರನಗರದ ಶಾರದಾ ಕಾಲೊನಿ 3ನೇ ಹಂತದಲ್ಲಿ ಮನೆ ಮೇಲೆ ಉರುಳಿದ್ದ ಮರ ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ
ವಿಜಯನಗರದ ಎಚ್.ವಿ.ಆರ್. ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿ ಮರ ಬಿದ್ದು ಕಾರು ಜಖಂಗೊಂಡಿತು. – ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ
ವಿಜಯನಗರದ ಎಚ್.ವಿ.ಆರ್. ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿ ಮರ ಬಿದ್ದು ಕಾರು ಜಖಂಗೊಂಡಿತು. – ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ
ಕದಿರೇನಹಳ್ಳಿಯ ಗುರುದಾಸ್ ಉದ್ಯಾನದ ಮುಂಭಾಗ ಮರ ನೆಲಕ್ಕುರುಳಿ ದ್ವಿಚಕ್ರ ವಾಹನ ಜಖಂ ಗೊಂಡಿತ್ತು
ಪ್ರಜಾವಾಣಿ ಚಿತ್ರ /ರಂಜು ಪಿ
ಕದಿರೇನಹಳ್ಳಿಯ ಗುರುದಾಸ್ ಉದ್ಯಾನದ ಮುಂಭಾಗ ಮರ ನೆಲಕ್ಕುರುಳಿ ದ್ವಿಚಕ್ರ ವಾಹನ ಜಖಂ ಗೊಂಡಿತ್ತು ಪ್ರಜಾವಾಣಿ ಚಿತ್ರ /ರಂಜು ಪಿ
ಹೊರವರ್ತುಲ ರಸ್ತೆಯಲ್ಲಿರುವ ವೀರಭದ್ರ ಸಿಗ್ನಲ್ ಬಳಿ ಸೋಮವಾರ ಮಧ್ಯಾಹ್ನವೂ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ನೀರು ರಸ್ತೆಯ ಮೇಲೆ ಉಕ್ಕಿ ಹರಿಯಿತು
ಪ್ರಜಾವಾಣಿ ಚಿತ್ರ/ ರಂಜು ಪಿ
ಹೊರವರ್ತುಲ ರಸ್ತೆಯಲ್ಲಿರುವ ವೀರಭದ್ರ ಸಿಗ್ನಲ್ ಬಳಿ ಸೋಮವಾರ ಮಧ್ಯಾಹ್ನವೂ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ನೀರು ರಸ್ತೆಯ ಮೇಲೆ ಉಕ್ಕಿ ಹರಿಯಿತು ಪ್ರಜಾವಾಣಿ ಚಿತ್ರ/ ರಂಜು ಪಿ
64; ಮಳೆನೀರು ನಿಂತ ಸ್ಥಳ–ರಸ್ತೆಗಳು
265; ಒಟ್ಟು ಧರೆಗುರುಳಿದ ಮರಗಳು 309; ಒಟ್ಟು ಬಿದ್ದ ಕೊಂಬೆಗಳು 261; ಬಿದ್ದ ವಿದ್ಯುತ್‌ ಕಂಬಗಳು 27; ಪ್ರದೇಶಗಳಲ್ಲಿ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಬಂದ ದೂರುಗಳ ವಿವರ
ವಲಯ;ನೀರು ನಿಂತ ಪ್ರದೇಶ; ಬಿದ್ದಮರ; ಬಿದ್ದ ಕೊಂಬೆ; ಬಿದ್ದ ವಿದ್ಯುತ್‌ ಕಂಬ;  ಇತರೆ–ಒಟ್ಟು ದೂರು ದಕ್ಷಿಣ;7;98;15;137;267 ಪಶ್ಚಿಮ;4;81;134;21;248 ಆರ್.ಆರ್. ನಗರ;13;19;25;44;102 ಪೂರ್ವ;5;15;64;7;92 ದಾಸರಹಳ್ಳಿ;10;9;12;50;82 ಯಲಹಂಕ;13;15;12;2;66 ಮಹದೇವಪುರ;8;12;12;0;35 ಬೊಮ್ಮನಹಳ್ಳಿ;4;16;12;0;34

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT