ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Rain : ಬೆಂಗಳೂರಿನಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ

Published 21 ಮೇ 2023, 10:36 IST
Last Updated 21 ಮೇ 2023, 10:36 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಅಲ್ಲಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ.

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆಯೂ ನಗರದಾದ್ಯಂತ ಅಬ್ಬರಿಸುತ್ತಿದೆ. ಬಿರುಗಾಳಿಗೆ ಕೆಲವೆಡೆ ಮರಗಳು ಧರೆಗುರುಳಿವೆ. ಕುಮಾರಕೃಪಾ ರಸ್ತೆಯಲ್ಲಿ ಕಾರು ಹಾಗೂ ಆಟೊದ ಮೇಲೆ ಮರದ ರೊಂಬೆಗಳು ಬಿದ್ದಿದ್ದು ಪ್ರಯಾಣಿಕರು ಪಾರಾಗಿದ್ಧಾರೆ. ಮಳೆಯೊಂದಿಗೆ ದಟ್ಟೈಸಿದ ಮೋಡದಿಂದ ಮಧ್ಯಾಹ್ನವೇ ಕಾರ್ಗತ್ತಲು ಆವರಿಸಿತ್ತು.

ಹೆಬ್ಬಾಳ, ಅಶೋಕ ನಗರ, ಆರ್‌ಟಿ ನಗರ, ಯಲಹಂಕ, ಮಲ್ಲೇಶ್ವರ, ಮೆಜೆಸ್ಟಿಕ್‌, ವಿಧಾನಸೌಧದ ಸುತ್ತಮುತ್ತ, ಸದಾಶಿವನಗರ, ಬಸವನಗುಡಿ, ಜಯನಗರ , ದೊಮ್ಮಲೂರು, ಹೊಸೂರು ರಸ್ತೆ ಭಾಗದಲ್ಲಿ ಅರ್ಧ ಗಂಟೆಯಿಂದ ನಿರಂತರ ಮಳೆಯಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT