ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಗುಡುಗು ಸಹಿತ ಭಾರಿ ಮಳೆ: 50ಕ್ಕೂ ಹೆಚ್ಚು ಸ್ಥಳಗಳು ಜಲಾವೃತ

Published 2 ಜೂನ್ 2024, 23:51 IST
Last Updated 2 ಜೂನ್ 2024, 23:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಭಾನುವಾರ ಸಂಜೆ ಒಂದು ಗಂಟೆಗೂ ಅಧಿಕ ಸಮಯ ಗುಡುಗು, ಮಿಂಚು, ಗಾಳಿ ಸಹಿತ ಭಾರಿ ಮಳೆಯಾಗಿದೆ. 50ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತಗೊಂಡಿದ್ದು, ನೂರಕ್ಕೂ ಹೆಚ್ಚು ಕಡೆಗಳಲ್ಲಿ ಮರ, ಮರದ ಕೊಂಬೆಗಳು ಮುರಿದು ಬಿದ್ದಿವೆ. ವಿವಿಧೆಡೆ ಆಟೊಗಳ ಮೇಲೆ ಮರ ಬಿದ್ದಿದೆ.

ಸಂಜೆ ಶುರುವಾದ ಸಣ್ಣದಾಗಿ ಶುರುವಾದ ಮಳೆ, ನಂತರ ಬಿರುಸಾಗಿ ಆರಂಭವಾಯಿತು. ಹೊರಮಾವಿನಲ್ಲಿ 7 ಸೆಂ.ಮೀ, ವಿದ್ಯಾಪೀಠದಲ್ಲಿ 5 ಸೆಂ.ಮೀ. ಹಾಗೂ ಕೋಡಿಹಳ್ಳಿ, ಕಾಟನ್‌ಪೇಟೆ, ಪುಲಕೇಶಿ ನಗರ, ದೊರೆಸಾನಿಪಾಳ್ಯ, ಪಟ್ಟಾಭಿರಾಮನಗರ, ಕುಶಾಲನಗರ, ದೊಡ್ಡನೆಕ್ಕುಂದಿ, ಬಿಳೆಕಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಯಿತು. ನಗರದಲ್ಲಿ 5 ಸೆಂ.ಮೀ ನಿಂದ 7 ಸೆಂ.ಮೀ ನಷ್ಟು ಮಳೆಯಾಗಿದೆ.

ನಗರದ ಆನಂದರಾವ್‌ ಸರ್ಕಲ್‌, ಖೋಡೆ ಸರ್ಕಲ್‌, ಶೇಷಾದ್ರಿಪುರಂ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿರುವ ಕೆಳಸೇತುವೆಗಳು ಜಲಾವೃತಗೊಂಡವು. ಅನೇಕ ಕಡೆಗಳಲ್ಲಿ ರಸ್ತೆಯಲ್ಲಿಯೇ ನೀರು ಹರಿದ ಕಾರಣ ವಾಹನಗಳು ಮುಂದಕ್ಕೆ ಚಲಿಸಲು ಪರದಾಡುವಂತಾಯಿತು. ಗಂಟೆಗಟ್ಟಲೆ ವಾಹನದಟ್ಟಣೆ ಉಂಟಾಯಿತು. ಕೆ.ಆರ್. ಮಾರುಕಟ್ಟೆಯಲ್ಲಿ ನೀರು ನಿಂತು ವ್ಯಾಪಾರಕ್ಕೂ, ವಾಹನ ಸಂಚಾರಕ್ಕೂ ತೊಂದರೆ ಉಂಟಾಯಿತು.

ಲಾಲ್‌ಬಾಗ್ ಮುಖ್ಯ ಗೇಟ್ ರಸ್ತೆಯ ಬಳಿ ಮರದ ಕೊಂಬೆ ಬಿದ್ದ ಕಾರಣ ಲಾಲ್‌ಬಾಗ್ ಪಶ್ಚಿಮ ಗೇಟ್ ಕಡೆಗೆ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಜಯನಗರ ಮೂರನೇ ಬ್ಲಾಕ್ ಕೆನರಾ ಬ್ಯಾಂಕ್ ಜಂಕ್ಷನ್ ಬಳಿ ಮರದ ಕೊಂಬೆ ಬಿದ್ದ ಕಾರಣ, ಸಿಂಡಿಕೇಟ್ ಬ್ಯಾಂಕ್ ಜಂಕ್ಷನ್ ಕಡೆಗೆ ವಾಹನಗಳು ಚಲಿಸದಂತಾಯಿತು. ಜಯನಗರ 3ನೇ ಬ್ಲಾಕ್ 27ನೇ ಕ್ರಾಸ್ ಜಂಕ್ಷನ್ ಬಳಿ ಮರ ಬಿದ್ದಿದ್ದರಿಂದ ಯಡಿಯೂರು ಜಂಕ್ಷನ್‌ ಕಡೆಗೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಜಯನಗರ ಐದನೇ ಬ್ಲಾಕ್ ಅರವಿಂದ ಜಂಕ್ಷನ್ ಬಳಿ ಮರ ಬಿದ್ದಿದ್ದರಿಂದ ರಾಜಲಕ್ಷ್ಮಿ ಜಂಕ್ಷನ್ ಕಡೆಗೆ ವಾಹನ ಸಂಚರಿಸಲು ತೊಂದರೆಯುಂಟಾಯಿತು.

ಕೆಎಚ್ ಸೇತುವೆ ಬಳಿ ಮರ ಬಿದ್ದಿದ್ದು ಜೈಮುನಿ ಸರ್ಕಲ್ ಕಡೆಗೆ ಸಂಚಾರ ಬಂದ್‌ ಆಯಿತು. ಮೇಕ್ರಿ ವೃತ್ತದ ಬಳಿ ಮರ ಬಿದ್ದಿದ್ದರಿಂದ ಯಶವಂತಪುರ ಕಡೆಗೆ ವಾಹನಗಳು ಕೆಲವು ಸಮಯ ಸಂಚರಿಸದಂತಾಯಿತು. ಯಲಹಂಕದ ಸಂದೀಪ್‌ ಉನ್ನಿಕೃಷ್ಣನ್ ರಸ್ತೆ ಬಳಿ ಮರ ಬಿದ್ದಿದ್ದರಿಂದ ದೊಡ್ಡಬಳ್ಳಾಪುರ ರಸ್ತೆ ಕಡೆಗೆ ವಾಹನ ಸಂಚಾರ ನಿಧಾನವಾಯಿತು. ದೊಮ್ಮಲೂರು ಮೇಲ್ಸೇತುವೆ ಬಳಿ ಮರ ಬಿದ್ದಿದ್ದರಿಂದ ಎಚ್‌ಎಎಲ್ ಕಡೆಗೆ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಎಚ್‌ಎಂಟಿ ಮುಖ್ಯರಸ್ತೆಯಲ್ಲಿ ಮರ ಬಿದ್ದಿದ್ದರಿಂದ ಪ್ಲಾಟಿನಂ ಸಿಟಿ ಕಡೆಗೆ ಸಂಚಾರ ನಿಧಾನಗೊಂಡಿತು.

ರಸ್ತೆಯಲ್ಲಿಯೇ ನೀರು ನಿಂತಿದ್ದರಿಂದ ನಾಯಂಡಹಳ್ಳಿ ಜಂಕ್ಷನ್‌ನಿಂದ ಬಿಎಚ್‌ಇಎಲ್‌ ಕಡೆಗೆ, ರಾಜೀವ್ ಗಾಂಧಿ ಜಂಕ್ಷನ್‌ನಿಂದ ಮಂತ್ರಿಮಾಲ್ ಕಡೆಗೆ, ಖೋಡೆ ಸರ್ಕಲ್‌ನಿಂದ ಲುಲು ಮಾಲ್ ಕಡೆಗೆ, ಯಲಹಂಕದಿಂದ ಕೋಗಿಲೆ ಕ್ರಾಸ್ ಕಡೆಗೆ, ಹೆಬ್ಬಾಳದಲ್ಲಿ ಮೇಲಿನ ರ‍್ಯಾಂಪ್‌, ಫ್ಲೈಓವರ್ ಕೆಳ ರ‍್ಯಾಂಪ್‌ ಕೆಂಪಾಪುರ ಕಡೆಗೆ, ಯೋಗೇಶ್ವರನಗರ ಕ್ರಾಸ್‌ನಿಂದ ಹೆಬ್ಬಾಳ ವೃತ್ತದ ಕಡೆಗೆ ಸಂಚಾರ ಕಷ್ಟವಾಯಿತು.

ಟಿನ್ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ಗ್ರಾಂಡ್ ಸೀಸನ್‌ ಹೋಟೆಲ್ ಹತ್ತಿರ ಮಳೆ ನೀರು ನಿಂತು ಸಮಸ್ಯೆ ಉಂಟಾಯಿತು. 

ಕೆಎಫ್‌ಸಿ ರಸ್ತೆಯಿಂದ ಗುಂಜೂರು ರಸ್ತೆ ಕಡೆಗೆ, ಫೀನಿಕ್ಸ್ ಮಾಲ್ ಮಹದೇವಪುರದಿಂದ ಹೂಡಿ ಕಡೆಗೆ, ಚಿಕ್ಕಜಾಲ ಕೋಟೆ ಕ್ರಾಸ್‌ನಿಂದ ನಗರದ ಕಡೆಗೆ, ಹೆಬ್ಬಾಳ ವೃತ್ತದಿಂದ ವೀರಣ್ಣಪಾಳ್ಯ ಕಡೆಗೆ, ಬೆನ್ನಿಗಾನಹಳ್ಳಿ ರೈಲ್ವೆ ಸೇತುವೆಯಿಂದ ನಗರದ ಕಡೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವೀರಸಂದ್ರ ಗೇಟ್‌ ಬಳಿ ನೀರು ನಿಂತಿರುವುದರಿಂದ ಹೊಸೂರು ರಸ್ತೆ ಕಡೆಗೆ ವಾಹನಗಳು ಸಾಗುವುದೇ ಕಷ್ಟವಾಯಿತು. ಯಲಹಂಕದ ಶೇಷಾದ್ರಿಪುರಂ ಕಾಲೇಜು ಬಳಿ ನೀರು ನಿಂತಿರುವುದರಿಂದ ದೊಡ್ಡಬಳ್ಳಾಪುರ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಪರದಾಡುವಂತಾಯಿತು.

ಬೆಂಗಳೂರಿನ ಮಾಗಡಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಭಾನುವಾರ ಬಿದ್ದಿದ್ದರಿಂದ ಆಟೊ ಜಖಂಗೊಂಡಿದ್ದು ಚಾಲಕ ಜೀವಾಪಾಯದಿಂದ ಪಾರಾಗಿದ್ದಾರೆ. ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್‌ ಬೋಳಾರ್
ಬೆಂಗಳೂರಿನ ಮಾಗಡಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಭಾನುವಾರ ಬಿದ್ದಿದ್ದರಿಂದ ಆಟೊ ಜಖಂಗೊಂಡಿದ್ದು ಚಾಲಕ ಜೀವಾಪಾಯದಿಂದ ಪಾರಾಗಿದ್ದಾರೆ. ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್‌ ಬೋಳಾರ್
ಎಂ.ಜಿ. ರಸ್ತೆ–ಕಸ್ತೂರಬಾ ರಸ್ತೆ ಕಿಂಗ್‌ ರೋಡ್‌ ಜಂಕ್ಷನ್‌ನಲ್ಲಿ ಹೊಳೆಯಂತಾದ ರಸ್ತೆಗಳು –ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಎಂ.ಜಿ. ರಸ್ತೆ–ಕಸ್ತೂರಬಾ ರಸ್ತೆ ಕಿಂಗ್‌ ರೋಡ್‌ ಜಂಕ್ಷನ್‌ನಲ್ಲಿ ಹೊಳೆಯಂತಾದ ರಸ್ತೆಗಳು –ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಟಿನ್‌ ಫ್ಯಾಕ್ಟರಿ ಬಳಿ ಜಲಾವೃತಗೊಂಡ ರಸ್ತೆ 
ಟಿನ್‌ ಫ್ಯಾಕ್ಟರಿ ಬಳಿ ಜಲಾವೃತಗೊಂಡ ರಸ್ತೆ 
ಜಯನಗರದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದು
ಜಯನಗರದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದು
ಲಾಲ್‌ಬಾಗ್‌ ಬಳಿ ರಸ್ತೆ ಮೇಲೆ ಮರ ಬಿದ್ದಿರುವುದು
ಲಾಲ್‌ಬಾಗ್‌ ಬಳಿ ರಸ್ತೆ ಮೇಲೆ ಮರ ಬಿದ್ದಿರುವುದು
ಹೆಬ್ಬಾಳದಲ್ಲಿ ಕಾಲುವೆಯಂತಾಗಿರುವ ರಸ್ತೆಯಲ್ಲಿ ವಾಹನಗಳು ಸಾಗಿದವು
ಹೆಬ್ಬಾಳದಲ್ಲಿ ಕಾಲುವೆಯಂತಾಗಿರುವ ರಸ್ತೆಯಲ್ಲಿ ವಾಹನಗಳು ಸಾಗಿದವು
ನಗರದ ಚಾಲುಕ್ಯ ಸರ್ಕಲ್‌ ಬಳಿ ಅರಮನೆ ರಸ್ತೆಯಲ್ಲಿ ಮರ ಮುರಿದು ರಸ್ತೆಗೆ ಬಿದ್ದಿರುವುದು. –ಪ್ರಜಾವಾಣಿ ಚಿತ್ರ/ಬಿ.ಎಚ್‌. ಶಿವಕುಮಾರ್‌
ನಗರದ ಚಾಲುಕ್ಯ ಸರ್ಕಲ್‌ ಬಳಿ ಅರಮನೆ ರಸ್ತೆಯಲ್ಲಿ ಮರ ಮುರಿದು ರಸ್ತೆಗೆ ಬಿದ್ದಿರುವುದು. –ಪ್ರಜಾವಾಣಿ ಚಿತ್ರ/ಬಿ.ಎಚ್‌. ಶಿವಕುಮಾರ್‌
ನಗರದ ಖೋಡೆ ವೃತ್ತದ ಬಳಿಯ ರೈಲ್ವೆ ಕೆಳಸೇತುವೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್‌ ಬೋಳಾರ್
ನಗರದ ಖೋಡೆ ವೃತ್ತದ ಬಳಿಯ ರೈಲ್ವೆ ಕೆಳಸೇತುವೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್‌ ಬೋಳಾರ್
ಆಟೊಗಳ ಮೇಲೆ ಬಿದ್ದ ಮರ
ಬಸವೇಶ್ವರ ನಗರ 8ನೇ ಅಡ್ಡರಸ್ತೆಯಲ್ಲಿ ಆಟೊ ಮೇಲೆ ಮರ ಬಿದ್ದಿದ್ದರಿಂದ ಚಾಲಕ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ಬಿದ್ದಿದ್ದರಿಂದ ರಸ್ತೆ ಬಂದ್‌ ಆಗಿ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಕೋರಮಂಗಲದಲ್ಲಿ ಆಟೊ ಮತ್ತು ವಿದ್ಯುತ್‌ ಕಂಬದ ಮೇಲೆ ಮರ ಮುರಿದು ಬಿದ್ದಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮಾಗಡಿ ರಸ್ತೆಯಲ್ಲಿ ಮರ ಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಆಟೊ ಚಾಲಕ ಪಾರಾಗಿದ್ದಾರೆ. ಕೈಗೆ ಗಾಯಗಳಾಗಿವೆ.
ಹೆಚ್ಚು ಮಳೆಯಾದ ಪ್ರದೇಶ;ಸೆಂ.ಮೀ.
ಹೊರಮಾವು;7.1 ವಿದ್ಯಾಪೀಠ;5.3 ಕೊಡಿಗೆಹಳ್ಳಿ;4.6 ಕಾಟನ್‌ಪೇಟೆ;3.9 ದಯಾನಂದನಗರ;3.9 ಪೀಣ್ಯ ಕೈಗಾರಿಕಾ ಪ್ರದೇಶ;3.7 ಜಕ್ಕೂರು;3.6 ನಾಗಪುರ;3.3 ಬೊಮ್ಮನಹಳ್ಳಿ;3.0 ಬಿ.ಟಿ.ಎಂ.ಲೇಔಟ್‌;3.0 ಮಾರುತಿಮಂದಿರ;3.0 ಚೌಡೇಶ್ವರಿ ವಾರ್ಡ್‌;2.8 ಯಲಹಂಕ;2.4 ಉತ್ತರಹಳ್ಳಿ;2.3 ಸಂಪಂಗಿರಾಮನಗರ;2.1 ನಾಯಂಡಹಳ್ಳಿ;2.0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT