ಭಾನುವಾರ, ಸೆಪ್ಟೆಂಬರ್ 19, 2021
31 °C

ಹೆಸರಘಟ್ಟ: ದಾಸನಪುರ ಎಪಿಎಂಸಿ ವರ್ತಕರಿಂದ ಪ್ರತಿಭಟನೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಸರಘಟ್ಟ: ‘ಎಪಿಎಂಸಿ ಅಧಿಕಾರಿಗಳು ವಾರಕ್ಕೊಂದು ಅದೇಶವನ್ನು ಜಾರಿ ಮಾಡುತ್ತಿದ್ದಾರೆ’ ಎಂದು ದೂರಿ ದಾಸನಪುರ ಎ.ಪಿ.ಎಂ.ಸಿ ವರ್ತಕರ ಸಂಘವು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿತು. 

‘ದಾಸನಪುರ ಉಪ ಮಾರುಕಟ್ಟೆಯಲ್ಲಿ ಮಳಿಗೆಯನ್ನು ಪಡೆದಿರುವ ವರ್ತಕರಿಗೆ ಯಶವಂತಪುರ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರ ಮಾಡಲ ಅವಕಾಶ ನೀಡುವುದಿಲ್ಲ ಹಾಗೂ ಎರಡು ಕಡೆ ಮಳಿಗೆಯನ್ನು ಪಡೆದವರ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ಆ. 19 ರಂದು ಅದೇಶವನ್ನು ಹೊರಡಿಸಿತ್ತು. ಆದರೆ ಈಗ ಅದನ್ನು ರದ್ದು ಪಡಿಸಿ ದಾಸನಪುರ ಉಪಮಾರುಕಟ್ಟೆಯಲ್ಲಿ ಮಳಿಗೆ ಪಡೆದು ಯಶವಂತಪುರ ಎ.ಪಿ.ಎಂ.ಸಿ.ಯಲ್ಲಿ ಮಳಿಗೆ ಪಡೆದವರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಅಧಿಕಾರಿಗಳು ತಾವೇ ಹೊರಡಿಸಿದ ಅದೇಶವನ್ನು 15 ದಿನಗಳಲ್ಲಿಯೇ ವಾಪಸ್‌ ತೆಗೆದುಕೊಂಡು ವರ್ತಕರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ’ ಎಂದು ದಾಸನಪುರ ವರ್ತಕರ ಸಂಘದ ಅಧ್ಯಕ್ಷ ಶ್ರೀರಾಮ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರವು ₹300ಕೋಟಿಯಷ್ಟು ವೆಚ್ಚ ಮಾಡಿ ದಾಸನಪುರ ಎ.ಪಿ.ಎಂ.ಸಿ.ಯನ್ನು ಮಾಡಿದೆ. ಆದರೆ ವ್ಯಾಪಾರ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಯಶವಂತಪುರ ಎ.ಪಿ.ಎಂ.ಸಿ.ಗಿಂತ ವಿಶಾಲವಾದ ಜಾಗವಿದ್ದರೂ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ಎಚ್ಚಿತ್ತುಕೊಂಡು ಒಂದು ಕಡೆ ಎ.ಪಿ.ಎಂ.ಸಿ.ಯನ್ನು ಮಾಡಿದರೆ ವರ್ತಕರಿಗೆ ಅನುಕೂಲವಾಗುತ್ತದೆ’ ಎಂದು ವರ್ತಕರ ಸಂಘದ ಪ್ರಸನ್ನ ಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು