ಪ್ರಜಾವಾಣಿ ವಾರ್ತೆ

ಬೆಂಗಳೂರು: ಹೈಕೋರ್ಟ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹55 ಲಕ್ಷ ವಂಚಿಸಿದ್ದ ಏಳು ಆರೋಪಿಗಳ ವಿರುದ್ಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಸುದರ್ಶನ್ ಅಡ್ಯಂತಾಯ, ಅರ್ಜುನ್ ಅಡ್ಯಂತಾಯ, ಲವಿನಾ ಜನೆಟ್ ಮೆಂಟೆರೊ, ಜೈಸನ್ ಡಿಸೋಜಾ, ಮಹೇಂದ್ರ ಎಸ್. ಕಾಂಚನ್, ಪಿ.ಪಿ.ರಾಕೇಶ್, ನೆಲ್ಸನ್ ವಿರುದ್ಧ ಪ್ರಕರಣ ದಾಖಲಾಗಿದೆ.

‘ಸಿ.ಎಂ. ಸುಮಿತ್ ಕುಮಾರ್ ಅವರು ₹8 ಲಕ್ಷ, ಜಿ.ಶಿವಕುಮಾರ್ ₹8 ಲಕ್ಷ, ಎಂ.ಎಸ್.ಮಹಿಮಾ ಅವರು ₹11 ಲಕ್ಷ, ಬಿ.ಆರ್.ಹರ್ಷಾ ಅವರು ₹15 ಲಕ್ಷ, ಹರ್ಷಿತಾ ಶ್ರೀನಿವಾಸ್ ₹13 ಲಕ್ಷವನ್ನು ಆರೋಪಿಗಳಿಗೆ ನೀಡಿದ್ದರು. ಒಟ್ಟು ₹55 ಲಕ್ಷ ಪಡೆದು ಆರೋಪಿಗಳು ವಂಚಿಸಿದ್ದಾರೆ’ ಎಂದು ದೂರು ನೀಡಲಾಗಿದೆ.

ಹೈಕೋರ್ಟ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆರೋಪಿಗಳು ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಎಸಗಲಾಗಿದೆ. ಇದೇ ಪ್ರಕರಣದಲ್ಲಿ ಸಿಸಿಬಿಯಲ್ಲೂ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಈ ಎಫ್ಐಆರ್ ಅನ್ನು ಅವರಿಗೆ ವರ್ಗಾವಣೆ ಮಾಡಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.