ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನ: ಮರಿಗೆ ಜನ್ಮ ನೀಡಿದ ದಶ್ಯಾ

Last Updated 26 ಜುಲೈ 2020, 1:48 IST
ಅಕ್ಷರ ಗಾತ್ರ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ನೀರಾನೆ (ಹಿಪ್ಪೋಪೊಟಾಮಸ್‌) ದಶ್ಯಾ ಮರಿಯೊಂದಕ್ಕೆ ಶುಕ್ರವಾರ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿವೆ ಎಂದು ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನೂತನ ಅತಿಥಿಯ ಆಗಮನದಿಂದ ನೀರಾನೆಗಳ ಸಂಖ್ಯೆಯು 8ಕ್ಕೇರಿದೆ. 11 ವರ್ಷದ ದಶ್ಯಾ ಮತ್ತು 17 ವರ್ಷದ ನಾಗ ನೀರಾನೆ ಜೋಡಿಗೆ ಜನಿಸಿರುವ ಮರಿಯಾಗಿದೆ. ಇದು ಎರಡನೇ ಮರಿಯಾಗಿದೆ. 2018ರಲ್ಲಿ ಅಲೋಕ್‌ ಎಂಬ ಗಂಡು ಮರಿಗೆ ಜನ್ಮ ನೀಡಿತ್ತು.

ತೇಜಾ, ನಾಗ, ಕಾರ್ತಿಕ್‌, ಅಲೋಕ್‌ ಸೇರಿ ಒಟ್ಟು 8 ನೀರಾನೆಗಳ ಕುಟುಂಬ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿದೆ. ನೀರಾನೆಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಾಣಿ ವಿನಿಮಯ ಮಾಡಿಕೊಳ್ಳುವ ಚಿಂತನೆಯಲ್ಲಿ ಉದ್ಯಾನವಿದೆ ಎಂದು ತಿಳಿಸಿದರು.

ಉದ್ಯಾನದ ವೈದ್ಯ ಡಾ.ಉಮಾಶಂಕರ್‌ ಮಾಹಿತಿ ನೀಡಿ, ’ನೀರಾನೆಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ನೀರಾನೆಗೆ ನೀಡುವ ಬೂಸದ ಜೊತೆಗೆ ವಿಟಮಿನ್‌ ಎ ಮತ್ತು ಖನಿಜಾಂಶದ ಪುಡಿಯನ್ನು ಮಿಶ್ರಣ ಮಾಡಿ ನೀಡಲಾಗುತ್ತಿದೆ. ಇದರಿಂದ ಬಾಣಂತಿ ನೀರಾನೆಗೆ ಹೆಚ್ಚಿನ ಪೌಷ್ಠಿಕ ಆಹಾರ ದೊರೆಯುತ್ತದೆ. ಬೂಸದ ಜೊತೆಗೆ ಗೆಣಸು, ಕ್ಯಾರೆಟ್‌, ಹುಲ್ಲು ನೀಡುವ ಮೂಲಕ ಜತನದಿಂದ ನೋಡಿಕೊಳ್ಳಲಾಗುತ್ತಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT