ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಎಚ್‌ಎನ್‌ಎಸ್‌ ಕಾರ್ಖಾನೆಯಲ್ಲಿ ದಾಳಿ ಆಗಿಲ್ಲ'

Last Updated 20 ಜುಲೈ 2021, 3:50 IST
ಅಕ್ಷರ ಗಾತ್ರ

ಬೆಂಗಳೂರು: ಯಲಚೇನಹಳ್ಳಿ ವೈ.ವಿ. ಅಣ್ಣಯ್ಯ ರಸ್ತೆಯಲ್ಲಿರುವ ‘ಎಚ್‌ಎನ್‌ಎಸ್‌” ಪೀಠೋಪಕರಣ ಕಾರ್ಖಾನೆ ಮೇಲೆ ಯಾವುದೇ ದಾಳಿ ನಡೆದಿಲ್ಲ. ಕಾರ್ಖಾನೆಗೂ ಪೊಲೀಸರ ದಾಳಿಗೂ ಯಾವುದೇ ಸಂಬಂಧವಿಲ್ಲ. ಕಾರ್ಖಾನೆ ಬಳಿಯ ಪಾಳುಬಿದ್ದ ಕಟ್ಟಡದ ಮೇಲೆ ದಾಳಿ ಮಾಡಲಾಗಿತ್ತು ಎಂಬುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಚುರುಕಿನ ಕಾರ್ಯಾಚರಣೆ ನಡೆಸುತ್ತಿರುವ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ಪಾಳುಬಿದ್ದ ಕಟ್ಟಡದ ಮೇಲೆ ಇತ್ತೀಚೆಗೆ ದಾಳಿ ಮಾಡಿದ್ದರು. 21 ಕೆ.ಜಿ 350 ಗ್ರಾಂ ಗಾಂಜಾ ಜಪ್ತಿ ಮಾಡಿ 13 ರೌಡಿಗಳನ್ನು ಬಂಧಿಸಿದ್ದರು.

ಕಾರ್ಯಾಚರಣೆ ಬಗ್ಗೆ ಪತ್ರಿಕಾ ಪ್ರಕಟಣೆ ನೀಡುವಾಗ ‘ಎಚ್‌ಎನ್‌ಎಸ್‌’ ಕಾರ್ಖಾನೆ ಹೆಸರು ಪ್ರಸ್ತಾಪವಾಗಿತ್ತು. ‘ಕಾರ್ಖಾನೆಯಲ್ಲಿ 21 ಕೆ.ಜಿ ಗಾಂಜಾ’ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಆದರೆ, ಕಾರ್ಖಾನೆ ಮೇಲೆ ಯಾವುದೇ ದಾಳಿ ನಡೆದಿಲ್ಲ. ಕಾರ್ಖಾನೆ ಬಳಿಯ ಕಟ್ಟಡದಲ್ಲಿ ಡ್ರಗ್ಸ್ ಸಿಕ್ಕಿದೆ. ಕೃತ್ಯ ನಡೆದ ಸ್ಥಳವನ್ನು ಗುರುತಿಸುವ ಉದ್ದೇಶದಿಂದ ಕಾರ್ಖಾನೆ ಹೆಸರು ಉಲ್ಲೇಖಿಸಲಾಗಿತ್ತು. ತಪ್ಪು ಮಾಹಿತಿಯಿಂದ ಕಾರ್ಖಾನೆ ಮೇಲೆ ದಾಳಿ ಎಂಬ ಸುದ್ದಿ ಪ್ರಕಟವಾಗಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT