ಸಾವಯವ ಬಣ್ಣಗಳ ಬಳಕೆ ಹೆಚ್ಚಲಿ:
ಸಿಂಥೆಟಿಕ್ ಬಣ್ಣಗಳಿಗೆ ಪರ್ಯಾಯವಾಗಿ ಸಾವಯವ ಬಣ್ಣಗಳನ್ನು ಬಳಸುವುದು ಸುರಕ್ಷಿತ. ಚರ್ಮರೋಗ ಹೊಂದಿರುವವರು ಯಾವುದೇ ರೀತಿಯ ಬಣ್ಣದ ಬಳಕೆ ಮಾಡದಿರುವುದು ಸೂಕ್ತ. ಹೋಳಿ ಆಚರಣೆಯ ನಂತರ ಆದಷ್ಟು ಬೇಗನೆ ಚರ್ಮವನ್ನು ನೀರಿನಿಂದ ಸ್ವಚ್ಛಗೊಳಿಸುವುದು ಅಗತ್ಯ. ಈ ವೇಳೆ ಚರ್ಮವನ್ನು ಉಜ್ಜುವುದು ಅಥವಾ ಅತಿಯಾದ ಬಿಸಿನೀರಿನಿಂದ ತೊಳೆಯುವುದನ್ನು ಮಾಡಬೇಡಿ. ಹೋಳಿ ನಂತರದ ಎರಡು ದಿನಗಳು ಯಾವುದೇ ರೀತಿಯ ಚರ್ಮದ ಆರೈಕೆ ಚಟುವಟಿಕೆಗಳನ್ನು ಮಾಡಲೂ ಹೋಗಬೇಡಿ.